IND vs PAK: ಮೊದಲ ಇನ್ನಿಂಗ್ಸ್​ ಮುಕ್ತಾಯ; ಟೀಮ್ ಇಂಡಿಯಾ ಬೌಲರ್​ಗಳಿಗೆ ತತ್ತರಿಸಿದ ಪಾಕ್​, 241ಕ್ಕೆ ಆಲ್​ಔಟ್​

ವಿಜಯವಾಣಿ - 2025-02-23T180829.682
Published on

IND vs PAK: ಪ್ರಸಕ್ತ ದುಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯವು ರೋಚಕ ಹಾದಿಯತ್ತ ಮಂದಗತಿಯಲ್ಲಿ ಸಾಗುತ್ತಿದ್ದು, ಮೊದಲ ಇನ್ನಿಂಗ್ಸ್ ಇದೀಗ ಮುಕ್ತಾಯಗೊಂಡಿದೆ. 49.4 ಓವರ್​ ಅಂತ್ಯಕ್ಕೆ ಆಲ್​ಔಟ್​ ಆದ ಪಾಕ್​, 241 ರನ್​ ಕಲೆಹಾಕಲು ಮಾತ್ರ ಶಕ್ತವಾಯಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಭಾರತಕ್ಕೆ ಫೀಲ್ಡಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟ್ ಮಾಡಲು ಕಣಕ್ಕಿಳಿದ ಆರಂಭಿಕರಾದ ಬಾಬರ್ ಆಜಮ್​ ( 26 ಎಸೆತ, 23 ರನ್​) ಮತ್ತು ಇಮಾಮ್​ (26 ಎಸೆತ, 10 ರನ್) ಗಳಿಸಿ, ಆರಂಭಿಕ ಹಂತದಲ್ಲೇ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಇವರ ನಂತರದಲ್ಲಿ ಅಖಾಡಕ್ಕಿಳಿದ ಕ್ಯಾಪ್ಟನ್ ಮೊಹಮ್ಮದ್​ ರಿಜ್ವಾನ್​ (77 ಎಸೆತ, 46​ ) ಮತ್ತು ಸೌದ್​ ಶಕೀಲ್​ (76 ಎಸೆತ. 62​) ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿದರು.

ಪಾಕ್​ ಬ್ಯಾಟರ್​ಗಳನ್ನು ದುಃಸ್ವಪ್ನದಂತೆ ಕಾಡಿದ ಟೀಮ್ ಇಂಡಿಯಾ ಬೌಲರ್​ಗಳ ಪೈಕಿ ಸ್ಪಿನ್​ ಮಾಂತ್ರಿಕ ಕುಲ್​ದೀಪ್ ಯಾದವ್ ಮೂರು ವಿಕೆಟ್​ ಕಬಳಿಸಿದರೆ, ವೇಗಿ ಹಾರ್ದಿಕ್​ ಪಾಂಡ್ಯ ಎರಡು ವಿಕೆಟ್​ ಪಡೆದರು. ಇನ್ನು ರವೀಂದ್ರ ಜಡೇಜಾ ಮತ್ತು ಅಕ್ಸರ್​ ಪಟೇಲ್, ಹರ್ಷಿತ್​ ರಾಣಾ​ ತಲಾ ಒಂದು ವಿಕೆಟ್​ ಪಡೆದು ತಂಡದ ಪರ ಮಿಂಚಿದರು. 242 ರನ್​ಗಳ ಗುರಿಯನ್ನು ಬೆನ್ನಟ್ಟಲಿರುವ ಟೀಮ್ ಇಂಡಿಯಾ, ಹೇಗೆ ಕಮಾಲ್ ಮಾಡಲಿದೆ? ಎಂಬುದು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net