IND vs NZ Test: ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ..ಅ.16 ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ

IND-VS-NZ new zealand
Published on

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್(IND vs NZ Test) ನಡುವೆ ಟೆಸ್ಟ್ ಸರಣಿ ಇದೇ ಅ.16 ರಿಂದ ಆರಂಭವಾಗಲಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಿಸಿದೆ.

ಮೂರು ಪಂದ್ಯ ಗಳ ಸರಣಿ ಇದಾಗಿದ್ದು, ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಅ.16 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಬಳಿಕ ಪುಣೆಯಲ್ಲಿ ಅ.24 ರಿಂದ ಎರಡನೇ ಪಂದ್ಯ ನಡೆಯಲಿದೆ. ಸರಣಿಯ ಕೊನೆಯ ಪಂದ್ಯವು ನವೆಂಬರ್ 1 ರಿಂದ ಮುಂಬೈನಲ್ಲಿ ನಡೆಯಲಿದೆ. ಕಿವೀಸ್ ತಂಡ 2021ರ ನಂತರ ಭಾರತದಲ್ಲಿ ಟೆಸ್ಟ್ ಸರಣಿ ಆಡಲು ಬರುತ್ತಿದೆ.

ಸ್ಟಾರ್ ಬ್ಯಾಟರ್ ಟಾಮ್ ಲ್ಯಾಥಮ್ ಏಕದಿನ ಮತ್ತು ಟಿ20 ತಂಡಗಳ ನಾಯಕರಾಗಿದ್ದು, ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲೂ ನ್ಯೂಜಿಲೆಂಡ್‌ ತಂಡವನ್ನು ಮೂರು ಮಾದರಿಯಲ್ಲೂ ಮುನ್ನಡೆಸಲಿದ್ದಾರೆ.

ಬ್ಲ್ಯಾಕ್‌ಕ್ಯಾಪ್ಸ್ ತಂಡ: IND vs NZ Test

ಟಾಮ್ ಲ್ಯಾಥಮ್ (ಸಿ), ಟಾಮ್ ಬ್ಲಂಡೆಲ್ (ವಾಕ್), ಮೈಕೆಲ್ ಬ್ರೇಸ್‌ವೆಲ್ (1ನೇ ಟೆಸ್ಟ್ ಮಾತ್ರ), ಮಾರ್ಕ್ ಚಾಪ್‌ಮನ್ (ಕವರ್), ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ವಿಲ್ ಒ'ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್, ಇಶ್ ಸೋಧಿ (2ನೇ ಮತ್ತು 3ನೇ ಟೆಸ್ಟ್ ಮಾತ್ರ), ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net