IND vs NZ: ಟಾಸ್ ಗೆದ್ದ ನ್ಯೂಜಿಲೆಂಡ್​ ಬ್ಯಾಟಿಂಗ್ ಆಯ್ಕೆ! ಇಂದು ಕೂಡ ಚೇಸಿಂಗ್ ಮಾಸ್ಟರ್​ ಆಗ್ತಾರಾ ಕಿಂಗ್ ಕೊಹ್ಲಿ

ವಿಜಯವಾಣಿ - 2025-03-09T140815.580
Published on

IND vs NZ Final: ಇಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್​ ಪಡೆ, ಭಾರತಕ್ಕೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿದೆ.

ಚಾಂಪಿಯನ್ಸ್​ ಟೂರ್ನಿಯಲ್ಲಿ ಆರಂಭದ ಪಂದ್ಯದಿಂದ ಸತತವಾಗಿ ಗೆಲುವು ನೋಡಿಕೊಂಡು ಬಂದಿರುವ ರೋಹಿತ್ ಶರ್ಮ ಪಡೆ, ಕಳೆದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯುವ ಮುಖೇನ ಅವರ ಫೈನಲ್ ಕನಸನ್ನು ಛಿದ್ರಗೊಳಿಸಿತು. ಈಗ ಅಂತಿಮ ಹಣಾಹಣಿಯಲ್ಲಿ ತಾವೇ ಸೋಲುಣಿಸಿದ್ದ ಕಿವೀಸ್ ಪಡೆ ಮತ್ತೆ ಮುಖಾಮುಖಿ ಎದುರಾಗಿರುವುದು ಕ್ರಿಕೆಟ್ ಪ್ರೇಮಿಗಳ ಕೌತುಕ ಹೆಚ್ಚಿಸಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದ್ಭುತ ಚೇಸಿಂಗ್ ಮಾಡಿದ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಚೇಸಿಂಗ್ ಮಾಸ್ಟರ್​ ಆಗಿ ತಂಡವನ್ನು ಗೆಲ್ಲಿಸುವುದರ ಜತೆಗೆ ಆಕರ್ಷಕ ಶತಕ ಬಾರಿಸಿದರು. ಇದಾದ ನಂತರದಲ್ಲಿ ಆಸೀಸ್​ ವಿರುದ್ಧವು ಉತ್ತಮ ಚೇಸ್ ಮಾಡಿದ ಕೊಹ್ಲಿ, ಶತಕ ವಂಚಿತರಾಗುವ ಮೂಲಕ ತಂಡವನ್ನು ಫೈನಲ್​ ಹಂತಕ್ಕೇರಿಸಲು ಹೆಚ್ಚಿನ ಕೊಡುಗೆ ನೀಡಿದರು. ಸದ್ಯ ಇಂದಿನ ಪಂದ್ಯದಲ್ಲಿಯೂ ವಿರಾಟ್ ಮೇಲೆ ಭಾರೀ ಭರವಸೆ ಹೆಚ್ಚಿದ್ದು, ಶತಕ ಬಾರಿಸುವ ಜತೆಗೆ ತಾವು ಚೇಸಿಂಗ್ ಮಾಸ್ಟರ್​ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲಿದ್ದಾರೆ ಎಂದು ಅಭಿಮಾನಿಗಳು ಆಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net