

IND vs ENG: ಇಂದಿನಿಂದ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಆರಂಭವಾಗಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶುಭಮನ್ ಗಿಲ್ ಪಡೆಗೆ ಆರಂಭಿಕ ಹಂತದಲ್ಲೇ ಹಿನ್ನಡೆ ಉಂಟಾಗಿದೆ.
ಆರಂಭಿಕರಾದ ಯಶಸ್ವಿ ಜೈಸ್ವಾಲ್ (2) ಮತ್ತು ಕೆ.ಎಲ್. ರಾಹುಲ್ (14) ತಂಡದ ಸ್ಕೋರ್ ಅನ್ನು 50 ರನ್ ಗಡಿದಾಟಿಸಲು ಶ್ರಮಿಸಿದರು. ಭರ್ಜರಿ ಪ್ರದರ್ಶನ ನೀಡಬೇಕಾದ ಓಪನರ್ಗಳೆ ಬಹುಬೇಗನೇ ಪೆವಿಲಿಯನ್ ಹಾದಿ ಹಿಡಿದದ್ದು, ಗಿಲ್ ಪಡೆಗೆ ಸಂಕಷ್ಟ ತಂದೊಡ್ಡಿದೆ. ಇಂಗ್ಲೆಂಡ್ ಪರ ಅಟ್ಕಿನ್ಸನ್ ಮತ್ತು ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಟೀಮ್ ಇಂಡಿಯಾದ ಒಟ್ಟು ಮೊತ್ತ 72/2 ತಲುಪಿದ ಬೆನ್ನಲ್ಲೇ ಮಳೆ ಕಾಡಿದ್ದು, ಕ್ರೀಸ್ನಲ್ಲಿದ್ದ ಸಾಯಿ ಸುದರ್ಶನ್ (25 ರನ್) ಮತ್ತು ಶುಭ್‌ಮನ್ ಗಿಲ್ (15 ರನ್) ಅಜೇಯರಾಗಿ ಉಳಿದಿದ್ದಾರೆ.