2ನೇ ದಿನದ ಟೆಸ್ಟ್​ ಬೆನ್ನಲ್ಲೇ ಇಂಗ್ಲೆಂಡ್​ಗೆ ಬಿಗ್​ ಶಾಕ್​! ಸ್ಟಾರ್ ಆಟಗಾರ ಕಣಕ್ಕಿಳಿಯುವುದು ಬಹುತೇಕ ಡೌಟ್​ | IND vs ENG

ವಿಜಯವಾಣಿ (32)
Published on

IND vs ENG: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಸಮಬಲದಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡಗಳಿವೆ. ಪ್ರಸ್ತುತ ಮೂರನೇ ಟೆಸ್ಟ್​ನ ಮೊದಲ ದಿನದಂದು ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್​ ಪಡೆಗೆ, ಜೋ ರೂಟ್​ ಮತ್ತು ಓಲಿ ಪೋಪ್​ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತಂಡದ ಒಟ್ಟು ಮೊತ್ತವನ್ನು 251 ರನ್​ಗೆ ತಲುಪಲು ಕೊಡುಗೆ ನೀಡಿತು. ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್​ 4 ವಿಕೆಟ್​ ನಷ್ಟಕ್ಕೆ 251 ರನ್​ ಗಳಿಸಿದ್ದು, ಇದೇ ವೇಳೆ ಕ್ಯಾಪ್ಟನ್​ ಬೆನ್​ ಸ್ಟೋಕ್ಸ್​ ಅವರ ಇಂಜುರಿ ತಂಡಕ್ಕೆ ದೊಡ್ಡ ಆಘಾತವನ್ನೇ ತಂದೊಡ್ಡಿದೆ.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್​ನ ಎರಡನೇ ದಿನಕ್ಕೆ ಎರಡು ತಂಡಗಳು ಕಾಲಿಟ್ಟಿದ್ದು, ಜೋ ರೂಟ್​ ಶತಕಕ್ಕೆ ಒಂದೇ ಒಂದು ರನ್​ನಿಂದ ಸನ್ನಿಹಿತವಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು ಇಂಗ್ಲೆಂಡ್ ಪರ ಭರ್ಜರಿ ಶತಕ ದಾಖಲಿಸುವ ತವಕದಲ್ಲಿದ್ದಾರೆ. ಇದು ತಂಡಕ್ಕೆ ಖುಷಿ ನೀಡಿದ್ದೇ ಆದರೂ ಅತ್ತ ನಾಯಕ ಬೆನ್​ ಸ್ಟೋಕ್ಸ್​ಗೆ ಆಗಿರುವ ಇಂಜುರಿ ಅವರ ಅನುಪಸ್ಥಿತಿಯನ್ನು ಎತ್ತಿ ಹಿಡಿದಿದೆ.

ಎರಡನೇ ದಿನದಂದು ಸ್ಟೋಕ್ಸ್​ ಬ್ಯಾಟಿಂಗ್ ಮುಂದುವರಿಸುತ್ತಾರೋ? ಇಲ್ಲವೋ? ಎಂಬುದೇ ಸದ್ಯ ಅನುಮಾನವಾಗಿದೆ. 39 ರನ್​ ದಾಖಲಿಸಿ, ಅಜೇಯರಾಗಿ ಉಳಿದಿರುವ ಸ್ಟೋಕ್ಸ್​, ತೀವ್ರ ತೊಡೆ ನೋವಿನಿಂದ ವಿಶ್ರಾಂತಿಯಲ್ಲಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಹ ಆಟಗಾರ ಹಾಗೂ ಉಪನಾಯಕ ಪೋಪ್​, ಗಾಯದ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿಲ್ಲ. ಆದರೆ, ಸ್ಟೋಕ್ಸ್ ರಾತ್ರಿಯಿಡೀ ರೆಸ್ಟ್​ ಮಾಡಿದ್ದಾರೆ ಎಂದರು,(ಏಜೆನ್ಸೀಸ್).

ಇಂಗ್ಲೆಂಡ್ ಬ್ಯಾಟಿಂಗ್ ವಿವರ

1. ಜ್ಯಾಕ್​ ಕ್ರಾಲಿ: 18 ರನ್, 43 ಎಸೆತ ​

2. ಬೆನ್​ ಡಕೆಟ್​: 23 ರನ್, 40 ಎಸೆತ​

3. ಓಲಿ ಪೋಪ್​: 44 ರನ್​, 104 ಎಸೆತ

4. ಜೋ ರೂಟ್​: 99* ರನ್​, 191 ಎಸೆತ

5. ಹ್ಯಾರಿ ಬ್ರೂಕ್​: 11 ರನ್, 20 ಎಸೆತ

6. ಬೆನ್​ ಸ್ಟೋಕ್ಸ್​: 39* ರನ್​, 102 ಎಸೆತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net