ಭಾರತ vs ಬಾಂಗ್ಲಾದೇಶ; 3 ನೇ ದಿನದ 1 ನೇ ಟೆಸ್ಟ್ ಪಂದ್ಯದ ಹೈಲೈಟ್ಸ್​ ಹೀಗಿದೆ…

cricket test
Published on

ಬಾಂಗ್ಲಾದೇಶ: ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 3 ನೇ ದಿನದ ಅಂತ್ಯದಲ್ಲಿ ಬಾಂಗ್ಲಾದೇಶ ತಂಡದವರು 42 ರನ್​ಗಳಿಗೆ 0 ವಿಕೆಟ್​ಗಳನ್ನು ಕಳೆದುಕೊಂಡು ದಿನ ಮುಗಿಸಿದ್ದಾರೆ. ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್​ಮನ್​ಗಳಾದ ನಜ್ಮುಲ್ ಶಾಂಟೊ ಮತ್ತು ಜಾಕಿರ್ ಅಜೇಯರಾಗಿ ಉಳಿದರು.

ಬಾಂಗ್ಲಾ ತಂಡಕ್ಕೆ ಗೆಲ್ಲಲು ಇನ್ನು 471 ರನ್‌ಗಳ ಅಗತ್ಯವಿದೆ. ಇದಕ್ಕೂ ಮುನ್ನ ಭಾರತ 512 ರನ್‌ಗಳ ಮುನ್ನಡೆ ಸಾಧಿಸಿದ ಬಳಿಕ 258 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು ಡಿಕ್ಲೇರ್ ಮಾಡಿತ್ತು. ಭಾರತದ ಪರ, ಚೇತೇಶ್ವರ ಪೂಜಾರ (102 ರನ್​ಗಳು) 130 ಎಸೆತಗಳಲ್ಲಿ ತಮ್ಮ 19 ನೇ ಟೆಸ್ಟ್ ಶತಕವನ್ನು ಪೂರೈಸಿದ್ದಾರೆ. ಇದು ಅವರ ಇಂದಿನವರೆಗಿನ ಅತೀ ವೇಗದ ಶತಕವಾಗಿದೆ. ಶುಭಮನ್ ಗಿಲ್ 110 ರನ್ ಗಳಿಸಿ ಔಟಾದರು. ಭಾರತ 254 ರನ್‌ಗಳನ್ನು ಪಡೆದು ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net