ಇಂದಿನಿಂದ ಮಹಾರಾಣಿ ಟ್ರೋಫಿ ಟಿ20 ಟೂರ್ನಿ: ವೇಳಾಪಟ್ಟಿ ಹೀಗಿದೆ

New Project (3)
Published on

ಬೆಂಗಳೂರು: ಬಿಸಿಸಿಐ ಮಹಿಳೆಯರಿಗಾಗಿ ಆರಂಭಿಸಿರುವ ಡಬ್ಲ್ಯುಪಿಎಲ್​ ಟೂರ್ನಿಯಂತೆ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) ಆರಂಭಿಸುತ್ತಿರುವ ಮಹಾರಾಣಿ ಟ್ರೋಫಿ ಟಿ20 ಟೂರ್ನಿಯ ಚೊಚ್ಚಲ ಆವೃತ್ತಿಗೆ ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ಸೋಮವಾರ ಚಾಲನೆ ದೊರೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್​ ಹಾಗೂ ಶಿವಮೊಗ್ಗ ಲಯನೆಸ್​ ತಂಡಗಳು ಎದುರಾಗಲಿದ್ದು, ಒಟ್ಟು ಐದು ತಂಡಗಳು ಭಾಗಿಯಾಗಲಿವೆ. ದಿನದ ಎರಡನೇ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್​-ಬೆಂಗಳೂರು ಬ್ಲಾಸ್ಟರ್ಸ್​ ತಂಡಗಳು ಎದುರಾಗಲಿವೆ.

ಆಗಸ್ಟ್​ 4ರಿಂದ 10ರವರೆಗೆ ಟೂರ್ನಿ ನಡೆಯಲಿದ್ದು, ಫೈನಲ್​ ಹೊರತುಪಡಿಸಿ ಇತರ ಎಲ್ಲ ಲೀಗ್​ ಪಂದ್ಯಗಳು ಆಲೂರಿನಲ್ಲಿ ನಡೆಯಲಿವೆ. ಪ್ರಶಸ್ತಿ ಸುತ್ತಿನ ಪಂದ್ಯ ಮಾತ್ರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿಗದಿಯಾಗಿದೆ. ರೌಂಡ್​ ರಾಬಿನ್​ನಲ್ಲಿ ಎಲ್ಲ ತಂಡಗಳು ಒಮ್ಮೆ ಮಾತ್ರ ಮುಖಾಮುಖಿ ಆಗಲಿವೆ. ಪುರುಷರ ಮಹಾರಾಜ ಟ್ರೋಫಿಯಲ್ಲಿ ತಂಡಗಳನ್ನು ಹೊಂದಿರುವ ಫ್ರಾಂಚೈಸಿಗಳ ಮಹಿಳಾ ತಂಡಗಳು ಕಣಕ್ಕಿಳಿಯಲಿವೆ. ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್​, ಬೆಂಗಳೂರು ಬ್ಲಾಸ್ಟರ್ಸ್​,ಮಂಗಳೂರು ಡ್ರ್ಯಾಗನ್ಸ್​, ಹುಬ್ಬಳ್ಳಿ ಟೈಗರ್ಸ್​, ಶಿವಮೊಗ್ಗ ಲಯನೆಸ್​ ಪ್ರಶಸ್ತಿಗಾಗಿ ಹೋರಾಡಲಿವೆ.

ಹುಬ್ಬಳ್ಳಿ ಟೈಗರ್ಸ್​ ತಂಡವನ್ನು ಭಾರತ ತಂಡದ ಅನುಭವಿ ಎಡಗೈ ಸ್ಪಿನ್ನರ್​ ರಾಜೇಶ್ವರಿ ಗಾಯಕ್ವಾಡ್​, ಮೈಸೂರು ವಾರಿಯರ್ಸ್​ ತಂಡವನ್ನು ಶುಭಾ ಸತೀಶ್​, ಶಿವಮೊಗ್ಗ ಲಯನೆಸ್​ ರೋಶಿನಿ ಕಿರಣ್​ ಹಾಗೂ ಮಂಗಳೂರು ಡ್ರ್ಯಾಗನ್ಸ್​ ತಂಡವನ್ನು ಪ್ರತ್ಯೂಷಾ ಕುಮಾರಿ ಮುನ್ನಡೆಸಲಿದ್ದಾರೆ. ಬೆಂಗಳೂರು ಬ್ಲಾಸ್ಟರ್ಸ್​ ತಂಡದ ನಾಯಕಿ ಹೆಸರನ್ನು ಇನ್ನಷ್ಟೇ ಘೋಷಿಸಬೇಕಿದ್ದು, ವರ್ಷಾರಂಭದಲ್ಲಿ 19 ವಯೋಮಿತಿ ಭಾರತ ಮಹಿಳಾ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟ ನಿಕಿ ಪ್ರಸಾದ್​ ಸಾರಥ್ಯ ವಹಿಸುವ ನಿರೀಕ್ಷೆ ಇದೆ. ಆಟಗಾರ್ತಿಯರ ಹರಾಜಿನಲ್ಲಿ ಗರಿಷ್ಠ 3.70 ಲಕ್ಷ ರೂಪಾಯಿ ನೀಡಿ ಬೆಂಗಳೂರು ತಂಡ ನಿಕಿ ಪ್ರಸಾದ್​ರನ್ನು ಸೇರ್ಪಡೆ ಮಾಡಿಕೊಂಡಿದೆ.

ಮಂಗಳೂರು ಡ್ರ್ಯಾಗನ್ಸ್​-ಬೆಂಗಳೂರು ಬ್ಲಾಸ್ಟರ್ಸ್​ ಮಧ್ಯಾಹ್ನ 1.45

ಆಗಸ್ಟ್​ 4 ಹುಬ್ಬಳ್ಳಿ ಟೈಗರ್ಸ್​-ಶಿವಮೊಗ್ಗ ಲಯನೆಸ್​ ಬೆಳಗ್ಗೆ 9.45

ದಿನಾಂಕ ಪಂದ್ಯ ಆರಂಭ

ಮಹಾರಾಣಿ ಟ್ರೋಫಿ ವೇಳಾಪಟ್ಟಿ

ಶಿವಮೊಗ್ಗ ಲಯನೆಸ್​-ಬೆಂಗಳೂರು ಬ್ಲಾಸ್ಟರ್ಸ್​ ಮಧ್ಯಾಹ್ನ 1.45

ಆಗಸ್ಟ್​ 5 ಮೈಸೂರು ವಾರಿಯರ್ಸ್​-ಹುಬ್ಬಳ್ಳಿ ಟೈಗರ್ಸ್​ ಬೆಳಗ್ಗೆ 9.45

ಶಿವಮೊಗ್ಗ ಲಯನೆಸ್​-ಮೈಸೂರು ವಾರಿಯರ್ಸ್​ ಮಧ್ಯಾಹ್ನ 1.45

ಆಗಸ್ಟ್​ 6 ಹುಬ್ಬಳ್ಳಿ ಟೈಗರ್ಸ್​-ಮಂಗಳೂರು ಡ್ರಾಗ್ಯನ್ಸ್​ ಬೆಳಗ್ಗೆ 9.45

ಮೈಸೂರು ವಾರಿಯರ್ಸ್​-ಮಂಗಳೂರು ಡ್ರ್ಯಾಗನ್ಸ್ ಮಧ್ಯಾಹ್ನ 1.45

ಆಗಸ್ಟ್​ 7 ಬೆಂಗಳೂರು ಬ್ಲಾಸ್ಟರ್ಸ್​-ಹುಬ್ಬಳ್ಳಿ ಟೈಗರ್ಸ್​ ಬೆಳಗ್ಗೆ 9.45

ಮಂಗಳೂರು ಡ್ರ್ಯಾಗನ್ಸ್​-ಶಿವಮೊಗ್ಗ ಲಯನೆಸ್​ ಮಧ್ಯಾಹ್ನ 1.45

ಆಗಸ್ಟ್​ 8 ಬೆಂಗಳೂರು ಬ್ಲಾಸ್ಟರ್ಸ್​-ಮೈಸೂರು ವಾರಿಯರ್ಸ್​ ಬೆಳಗ್ಗೆ 9.45

ಸೆಮಿಫೈನಲ್​-2 ಮಧ್ಯಾಹ್ನ 1.45

ಆಗಸ್ಟ್​ 9 ಸೆಮಿಫೈನಲ್​-1 ಬೆಳಗ್ಗೆ 9.45

ಆಗಸ್ಟ್​ 10 ಫೈನಲ್​ ಸಂಜೆ 6.00

ಎಲ್ಲ ಪಂದ್ಯಗಳು ಫ್ಯಾನ್​ಕೋಡ್​ನಲ್ಲಿ ನೇರಪ್ರಸಾರ ಕಾಣಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net