ಡಿಪಿಎಲ್​ ಟಿ20 ಟೂರ್ನಿಯಲ್ಲಿ ಅನುಚಿತ ವರ್ತನೆ: ದಿಗ್ವೇಶ್​ ರಾಥಿ ಸೇರಿ 5 ಆಟಗಾರರಿಗೆ ಶಿಕ್ಷೆ

New Project (2)
Published on

ನವದೆಹಲಿ: ಫುಟ್​ಬಾಲ್​ ಪಂದ್ಯಗಳಲ್ಲಿ ಹಲವು ಆಟಗಾರರಿಗೆ ಕೆಂಪು, ಹಳದಿ ಕಾರ್ಡ್​ಗಳನ್ನು ನೀಡುವುದು ಸಾಮಾನ್ಯ. ಆದರೆ ಇದೀಗ ಕ್ರಿಕೆಟ್​ ಪಂದ್ಯವೊಂದು ಕೂಡ ಅನುಚಿತ ವರ್ತನೆಗಾಗಿ ಹಲವು ಆಟಗಾರರಿಗೆ ದಂಡ ಶಿಕ್ಷೆ ವಿಧಿಸಿದ ಘಟನೆಗೆ ಸಾಕ್ಷಿ ಆಗಿದೆ. ದೆಹಲಿ ಪ್ರೀಮಿಯರ್​ ಲೀಗ್​ (ಡಿಪಿಎಲ್​) ಟಿ20 ಟೂರ್ನಿಯಲ್ಲಿ ದಕ್ಷಿಣ ದೆಹಲಿ ಸೂಪರ್​ಸ್ಟಾರ್ಸ್​ ಮತ್ತು ಪಶ್ಚಿಮ ದೆಹಲಿ ಲಯನ್ಸ್​ ತಂಡಗಳ ಒಟ್ಟು 5 ಆಟಗಾರರು ದಂಡ ಶಿಕ್ಷೆಗೆ ಗುರಿಯಾಗಿದ್ದಾರೆ.

ದೆಹಲಿ ಲಯನ್ಸ್​ ನಾಯಕ ನಿತೀಶ್​ ರಾಣಾ ಪಂದ್ಯದಲ್ಲಿ ಶತಕ ಸಿಡಿಸಿದರು ಮತ್ತು ಇದೇ ವೇಳೆ ಎದುರಾಳಿ ತಂಡದಲ್ಲಿದ್ದ ಐಪಿಎಲ್​ ತಾರೆ ದಿಗ್ವೇಶ್​ ರಾಥಿ ಜತೆಗೆ ವಾಗ್ವಾದ ನಡೆಸಿದರು. ಇದಕ್ಕಾಗಿ ನಿತೀಶ್​ ರಾಣಾಗೆ ಪಂದ್ಯ ಸಂಭಾವನೆಯ ಶೇ. 50 ಮತ್ತು ದಿಗ್ವೇಶ್​ ರಾಥಿಗೆ ಶೇ. 80 ದಂಡ ವಿಧಿಸಲಾಗಿದೆ. ಜತೆಗೆ ಎದುರಾಳಿಯನ್ನು ನಿಂದಿಸಿದ ದೆಹಲಿ ಲಯನ್ಸ್​ನ ಕ್ರಿಶ್​ ಯಾದವ್​ಗೆ ಶೇ. 100, ದೆಹಲಿ ಸೂಪರ್​ಸ್ಟಾರ್ಸ್​ನ ಅಮನ್​ ಭಾರತಿಗೆ ಶೇ. 30, ಸುಮಿತ್​ ಮಾಥುರ್​ಗೆ ಶೇ. 50 ದಂಡ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net