ಜಯದ ವಿಶ್ವಾಸದಲ್ಲಿ ಆರ್‌ಸಿಬಿ : ಪ್ಲೆಸಿಸ್ ಪಡೆಗೆ ಕಳೆದ ವರ್ಷದ ಸೇಡು ತೀರಿಸುವ ತವಕ

New-Project-1-16
Published on

ಅಹಮದಾಬಾದ್: ಸತತ ಸೋಲಿನ ಸರಪಳಿ ಕಳಚಿ ಗೆಲುವಿನ ಲಯಕ್ಕೆ ಮರಳಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-17ರ ತನ್ನ 10ನೇ ಲೀಗ್ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ವಿರುದ್ಧ ಭಾನುವಾರ ಸೆಣಸಾಡಲಿದೆ. ಪ್ಲೇಆ್ ಹಂತಕ್ಕೇರುವ ಅಲ್ಪಸ್ವಲ್ಪ ಆಸೆ ಜೀವಂತ ಇರಿಸಿಕೊಂಡಿರುವ ್ಾ ಡು ಪ್ಲೆಸಿಸ್ ಪಡೆ ಲಯ ಕಾಯ್ದುಕೊಳ್ಳುವ ತವಕದಲ್ಲಿದೆ.

ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಅದರದೇ ತವರಿನಲ್ಲಿ ಮಣಿಸಿ ಪುಟಿದೆದ್ದಿರುವ ಆರ್‌ಸಿಬಿ, ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 2 ಗೆಲುವು, 7 ಸೋಲಿನೊಂದಿಗೆ 4 ಅಂಕ ಸಂಪಾದಿಸಿದೆ. ಉಳಿದ 5 ಲೀಗ್ ಪಂದ್ಯಗಳಲ್ಲಿ ಜಯ ಸಾಧಿಸಿದರೂ, ಪ್ಲೇಆ್ ಸ್ಥಾನದ ಗ್ಯಾರಂಟಿ ಇಲ್ಲ. ಆದರೆ ಗಣಿತಶಾಸದ ಆಧಾರದಲ್ಲಿ ರೇಸ್‌ನಲ್ಲಿ ಉಳಿಯಲಿದೆ. ಮತ್ತೊಂದೆಡೆ ಅಸ್ಥಿರ ನಿರ್ವಹಣೆಯಿಂದ ಬಳಲುತ್ತಿರುವ ಗುಜರಾತ್ ಟೈಟಾನ್ಸ್ ಮುಂದಿನ ಹಾದಿ ಕಠಿಣವೆನಿಸಿದೆ. ಆಡಿರುವ 9 ಪಂದ್ಯಗಳಲ್ಲಿ 4 ಗೆಲುವು, 5 ಸೋಲಿನೊಂದಿಗೆ 8 ಅಂಕ ಕಲೆಹಾಕಿದೆ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 4 ರನ್‌ಗಳ ಸೋಲು ಅನುಭವಿಸಿರುವ ಗುಜರಾತ್ ಪ್ಲೇಆ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯ ಮಹತ್ವದ್ದಾಗಿದೆ.

ಕಳೆದ ವರ್ಷದ ಸೇಡು ತೀರಿಸುವ ತವಕ: ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಇದುವರೆಗೆ 3 ಬಾರಿ ಎದುರಾಗಿದ್ದು, 2 ಗೆಲುವಿನೊಂದಿಗೆ ಗುಜರಾತ್ ಮೇಲುಗೈ ಸಾಧಿಸಿದೆ. ಆದರೆ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಗುಜರಾತ್ ತಂಡ ಆರ್‌ಸಿಬಿ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಪ್ಲೇಆ್ ರೇಸ್‌ನಿಂದ ಹೊರದಬ್ಬಿತ್ತು. ಉತ್ತಮ ರನ್‌ರೇಟ್ ಜತೆಗೆ 14 ಅಂಕ ಹೊಂದಿದ್ದ ಆರ್‌ಸಿಬಿ ಕನಿಷ್ಠ ಜಯ ಸಾಧಿಸಿದರೆ ಅಗ್ರ 4ರಲ್ಲಿ ಸ್ಥಾನ ಪಡೆಯುವ ಅವಕಾಶ ಹೊಂದಿತ್ತು. ಅಂದಿನ ಪಂದ್ಯದಲ್ಲಿ ಶುಭಮಾನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಶತಕ ಸಿಡಿಸಿ ಅಜೇಯವಾಗಿ ಉಳಿದಿದ್ದರು. ಕಳೆದ ವರ್ಷದ ಸೋಲಿಗೆ ಮುಯ್ಯಿ ತೀರಿಸುವ ಹಂಬಲದಲ್ಲಿ ಪ್ಲೆಸಿಸ್ ಪಡೆ ಇದೆ.

ಾರ್ಮ್‌ನಲ್ಲಿ ಬ್ಯಾಟಿಂಗ್ ವಿಭಾಗ: ಹಿಂದಿನ ಪಂದ್ಯದಲ್ಲಿ ಸರ್ವಾಂಗೀಣ ನಿರ್ವಹಣೆ ತೋರಿದ ಆರ್‌ಸಿಬಿ ತಂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ವಿರಾಟ್ ಕೊಹ್ಲಿ, ಡು ಪ್ಲೆಸಿಸ್ ಉತ್ತಮ ಲಯದಲ್ಲಿದ್ದಾರೆ. ಆದರೆ ಕೊಹ್ಲಿ ಪವರ್‌ಪ್ಲೇ ಬಳಿಕ ರನ್‌ಗಳಿಕೆಗೆ ಚುರುಕು ನೀಡಬೇಕಿದೆ. ಮ್ಯಾಕ್ಸ್‌ವೆಲ್ ಸ್ಥಾನವನ್ನು ಸಮರ್ಥವಾಗಿ ತುಂಬಿರುವ ವಿಲ್ ಜಾಕ್ಸ್ ಆಲ್ರೌಂಡ್ ನಿರ್ವಹಣೆ ತಂಡಕ್ಕೆ ನೆರವಾಗಿದೆ. ರಜತ್ ಪಾಟೀದಾರ್ ಸಹ ಾರ್ಮ್‌ಗೆ ಮರಳಿದ್ದು, 3 ಅರ್ಧಶತಕ ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಇಂಪ್ಯಾಕ್ಟ್ ಮಾಡಿದ ಸ್ವಪ್ನಿಲ್ ಸಿಂಗ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದು, ಕರ್ಣ್ ಶರ್ಮ ಜತೆಯಾಗಿ ಸ್ಪಿನ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ವೇಗಿಗಳಿಂದ ಸುಧಾರಿತ ಬೌಲಿಂಗ್ ಪ್ರದರ್ಶನ ಅಗತ್ಯವಿದೆ. ಲಾಕಿ ರ್ಗ್ಯುಸನ್ ಬದಲಿಗೆ ರೀಸ್ ಟಾಪ್ಲೆ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಮುಖಾಮುಖಿ: 3

ಆರ್‌ಸಿಬಿ: 1

ಗುಜರಾತ್: 2

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net