ಜಾವೆಲಿನ್​ ಎಸೆತದಲ್ಲಿ ನೀರಜ್​ ಚೋಪ್ರಾ, ಕಿಶೋರ್ ಜೆನಾ​, ಕನ್ನಡಿಗ ಮನು ಫೈನಲ್​ಗೆ ನೇರಪ್ರವೇಶ; ಹೀಗಿದೆ ಕಾರಣ...

web javelin
Published on

ಭುವನೇಶ್ವರ: ಭಾರತದ ಅಗ್ರ ಜಾವೆಲಿನ್​ ಥ್ರೋ ತಾರೆಯರಾದ ನೀರಜ್​ ಚೋಪ್ರಾ, ಕಿಶೋರ್​ ಜೆನಾ ಮತ್ತು ಕನ್ನಡಿಗ ಮನು ಡಿ.ಪಿ.ಗೆ ಹಾಲಿ ೆಡರೇಷನ್​ ಕಪ್​ ಅಥ್ಲೆಟಿಕ್ಸ್​ ಕೂಟದಲ್ಲಿ ಬುಧವಾರ ನೇರವಾಗಿ ಫೈನಲ್​ನಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗಿದೆ. ಈ ಮೂವರು ಈಗಾಗಲೆ ವೃತ್ತೀಜಿವನದಲ್ಲಿ 75 ಮೀಟರ್​ ದೂರವನ್ನು ಹಲವು ಬಾರಿ ಸಾಧಿಸಿರುವುದರಿಂದ ಈ ವಿನಾಯಿತಿಯನ್ನು ನೀಡಲಾಗಿದೆ.

ಮಂಗಳವಾರ ಜಾವೆಲಿನ್​ ಎಸೆತದ ಅರ್ಹತಾ ಸುತ್ತು ನಡೆಯಲಿದ್ದು, ಇದರಲ್ಲಿ ಕನಿಷ್ಠ 75 ಮೀ. ಎಸೆದವರಿಗೆ ಅಥವಾ ಅಗ್ರ 12 ಮಂದಿಗೆ ೈನಲ್​ ಪ್ರವೇಶ ನೀಡಲಾಗುತ್ತದೆ. ಆದರೆ ಒಲಿಂಪಿಕ್ಸ್​-ವಿಶ್ವ ಚಾಂಪಿಯನ್​ ನೀರಜ್​ ಚೋಪ್ರಾ ಕಳೆದ ವಾರವಷ್ಟೇ ದೋಹಾ ಡೈಮಂಡ್​ ಲೀಗ್​ನಲ್ಲಿ 88.38 ಮೀ. ಎಸೆದಿದ್ದಾರೆ. ಕಿಶೋರ್​ ಕೂಡ ಅಲ್ಲಿ ಗರಿಷ್ಠ 76.31 ಮೀ. ಎಸೆದಿದ್ದರು. ಇನ್ನು ಮನು ಡಿಪಿ ಕೂಡ 84.35 ಮೀ. ಎಸೆತದ ವೈಯಕ್ತಿಕ ಶ್ರೇಷ್ಠ ಸಾಧನೆ ಹೊಂದಿದ್ದಾರೆ.

ನೀರಜ್​, ಕಿಶೋರ್​, ಮನು ನೇರಅರ್ಹತೆಯಿಂದಾಗಿ ಇದೀಗ ಅರ್ಹತಾ ಸುತ್ತಿನಿಂದ 9 ಸ್ಪರ್ಧಿಗಳು ಮಾತ್ರ ೈನಲ್​ಗೇರಲಿದ್ದಾರೆ. ನೀರಜ್​ 3 ವರ್ಷಗಳ ಬಳಿಕ ತವರು ನೆಲದಲ್ಲಿ ಸ್ಪರ್ಧಿಸಲಿದ್ದಾರೆ.

ನೀರಜ್​, ಕಿಶೋರ್​ ಈಗಾಗಲೆ ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿದ್ದಾರೆ. ಮನು ಭಾರತದ 3ನೇ ಸ್ಪರ್ಧಿಯಾಗಿ ಒಲಿಂಪಿಕ್ಸ್​ ಅರ್ಹತೆ ಗಳಿಸಬೇಕಾದರೆ, 85.50 ಮೀ. ಎಸೆತದ ಮಾನದಂಡವನ್ನು ತಲುಪಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net