

ನೋಯ್ಡಾ: ರೈಡರ್ ವಿನಯ್ ಅವರ ಅದ್ಭುತ ಆಟದ ಜತೆಗೆ ಸಾಂಘಿಕ ಪ್ರದರ್ಶನ ಮುಂದುವರಿಸಿದ ಹರಿಯಾಣ ಸ್ಟೀಲರ್ಸ್ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ 83ನೇ ಪಂದ್ಯದಲ್ಲಿತಮಿಳ್ ತಲೈವಾಸ್ ತಂಡವನ್ನು ಸುಲಭವಾಗಿ ಮಣಿಸಿತು. ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿಜೈದೀಪ್ ನೇತೃತ್ವದ ಹರಿಯಾಣ 42-30 ಅಂಕಗಳಿಂದ ಸಚಿನ್ ಸಾರಥ್ಯದ ತಲೈವಾಸ್ ತಂಡಕ್ಕೆ ಆಘಾತ ನೀಡಿತು. ಈ ಫಲಿತಾಂಶದೊಂದಿಗೆ 12ನೇ ಜಯ ಗಳಿಸಿದ ಹರಿಯಾಣ ತಂಡ ಒಟ್ಟಾರೆ 61 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು. ಅತ್ತ ಹಿಂದಿನ ಗೆಲುವಿನ ಲಯವನ್ನು ಕಾಯ್ದುಕೊಳ್ಳಲು ವಿಫಲಗೊಂಡ ತಲೈವಾಸ್, 8ನೇ ಸೋಲಿಗೆ ಒಳಗಾಯಿತು.
ಹರಿಯಾಣ ತಂಡದ ಪರ ವಿನಯ್ 9 ಅಂಕಗಳನ್ನು ಗಳಿಸಿದ ಗೆಲುವಿನಲ್ಲಿನಿರ್ಣಾಯಕ ಪಾತ್ರವಹಿಸಿದರೆ, ನವೀನ್ ಮತ್ತು ರಾಹುಲ್ ತಲಾ 6 ಅಂಕಗಳ ಕೊಡುಗೆ ನೀಡಿದರು. ಅತ್ತ ತಲೈವಾಸ್ ತಂಡದ ಪರ ಮೋಯಿನ್ ಮತ್ತು ನಿತೇಶ್ ಕುಮಾರ್ ಕ್ರಮವಾಗಿ 8 ಮತ್ತು 6 ಅಂಕಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರು.
ಹಿನ್ನಡೆ ತಗ್ಗಿಸುವ ಆತುರದಲ್ಲಿ ಒತ್ತಡಕ್ಕೆ ಸಿಲುಕಿದ ತಲೈವಾಸ್ ತಂಡ, ಹೊಂದಾಣಿಕೆ ಆಟವಾಡುವಲ್ಲಿವಿಫಲಗೊಂಡಿತು. ಹೀಗಾಗಿ ನಾಲ್ಕು (30-34) ನಿಮಿಷಗಳ ಅಂತರದಲ್ಲಿ ಮತ್ತೊಮ್ಮೆ ತಮಿಳ್ ತಂಡವನ್ನು ಕಟ್ಟಿಹಾಕಿದ ಹರಿಯಾಣ ತನ್ನ ಮುನ್ನಡೆಯನ್ನು 32-18ಕ್ಕೆ ಹೆಚ್ಚಿಸಿಕೊಂಡು ಗೆಲುವನ್ನು ಖಚಿತಪಡಿಸಿಕೊಂಡಿತು.
ಪ್ರಸಕ್ತ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಹಾಗೂ ಸ್ಥಿರ ಪ್ರದರ್ಶನ ಮುಂದುವರಿಸಿರುವ ಹರಿಯಾಣ ಸ್ಟೀಲರ್ಸ್, ಮುನ್ನಡೆ ವಿಸ್ತರಿಸುವ ವಿಶ್ವಾಸದೊಂದಿಗೆ ದ್ವಿತೀಯಾರ್ಧ ಆರಂಭಿಸಿತು. ಆದರೆ ಹಿನ್ನಡೆ ತಗ್ಗಿಸಬೇಕಾದ ಒತ್ತಡದಲ್ಲಿಕಣಕ್ಕಿಳಿದ ತಲೈವಾಸ್, ಟ್ಯಾಕಲ್ ಮತ್ತು ರೇಡಿಂಗ್ ಎರಡರಲ್ಲೂತಿಣುಕಾಡಿತು. ಆದರೆ ಆಲ್‌ರೌಂಡ್ ಪ್ರದರ್ಶನ ತೋರಿದ ಹರಿಯಾಣ ಆಟಗಾರರು, ಎರಡು ಆಲೌಟ್ ಪಾಯಿಂಟ್ಸ್, 1 ಬೋನಸ್ ಪಾಯಿಂಟ್ಸ್ ಜತೆಗೆ ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿಕ್ರಮವಾಗಿ 4 ಮತ್ತು 3 ಅಂಕಗಳನ್ನು ಗಳಿಸಿದರು.
30 ನಿಮಿಷಕ್ಕೂ ಮುನ್ನ ತಮಿಳ್ ತಲೈವಾಸ್ ತಂಡವನ್ನು ಪಂದ್ಯದಲ್ಲಿಮೊದಲ ಆಲೌಟ್ ಮಾಡಿದ ಹರಿಯಾಣ 23-14ರಲ್ಲಿಮುನ್ನಡೆ ಹೆಚ್ಚಿಸಿಕೊಳ್ಳುವ ಮೂಲಕ ಮತ್ತೊಂದು ಗೆಲುವಿಗೆ ವೇದಿಕೆ ಸಜ್ಜುಗೊಳಿಸಿಕೊಂಡಿತು. ಈ ವೇಳೆ ಹರಿಯಾಣದ ವಿನಯ್ 100 ರೇಡಿಂಗ್ ಪಾಯಿಂಟ್ಸ್ ಕಲೆಹಾಕಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರೆ, ಶಿವಂ ಪತರೆ 200 ರೇಡಿಂಗ್ ಅಂಕಗಳನ್ನು ಗಳಿಸಿದ ಗೌರವ ಸಂಪಾದಿಸಿದರು.
ತಮಿಳ್ ತಲೈವಾಸ್ ತಂಡದ ಪ್ರಬಲ ರಕ್ಷ ಣಾತ್ಮಕ ಆಟದ ಹೊರತಾಗಿಯೂ ರೇಡಿಂಗ್ ವಿಭಾಗದಲ್ಲಿಮಿಂಚಿದ ಹರಿಯಾಣ ಸ್ಟೀಲರ್ಸ್ ತಂಡ ಪಂದ್ಯದ ಮೊದಲಾರ್ಧಕ್ಕೆ 13 -10 ಅಂಕಗಳಿಂದ ಮೇಲುಗೈ ಸಾಧಿಸಿತು.
ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡುವ ಮೂಲಕ ಮೊದಲ ಏಳು ನಿಮಿಷಗಳ ಅಂತ್ಯಕ್ಕೆ 6-3ರಲ್ಲಿಮುನ್ನಡೆ ಸಾಧಿಸಿದ ಸ್ಟೀಲರ್ಸ್, ಹತ್ತು ನಿಮಿಷಗಳ ಆಟ ಮುಕ್ತಾಯಗೊಂಡ 10-5ರಲ್ಲಿಅಧಿಪತ್ಯ ಸಾಧಿಸಿತು. ಲೀಗ್‌ನಲ್ಲಿ2.15 ಕೋಟಿ ರೂಪಾಯಿ ಪಡೆದಿರುವ ನಾಯಕ ಸಚಿನ್ ಮೊದಲಾರ್ಧದಲ್ಲಿಖಾತೆ ತೆರೆಯಲು ವಿಫಲಗೊಂಡಿದ್ದು, ತಲೈವಾಸ್ ತಂಡದ ಹಿನ್ನೆಡೆಗೆ ಪ್ರಮುಖ ಕಾರಣವಾದರೆ, ವಿನಯ್ ಮತ್ತು ಶಿವಂ ಸ್ಟೀಲರ್ಸ್ ಮುನ್ನಡೆಯಲ್ಲಿನಿರ್ಣಾಯಕ ಪಾತ್ರವಹಿಸಿದರು.
ನವೆಂಬರ್ 30 ಪಟನಾ ಪೈರೇಟ್ಸ್ ಮತ್ತು ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ತೆಲುಗು ಟೈಟನ್ಸ್ ತಂಡಗಳು ಮುಖಾಮುಖಿಯಾಗ