ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಬಾಕ್ಸರ್​ ಇಮಾನೆ ಖೇಲಿಫ್​ ಒಬ್ಬ ಪುರುಷ! ಹೊರಬಿತ್ತು ಸ್ಫೋಟಕ ವರದಿ | Immane Khelif

Imane Khelif
Published on

ಪ್ಯಾರಿಸ್​: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪ್ಯಾರಿಸ್​ ಒಲಿಂಪಿಕ್ಸ್​ 2024ರ ಪದಕದಾಟದಲ್ಲಿ ಮಹಿಳೆಯರ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅಲ್ಜೀರಿಯಾದ ಇಮಾನೆ ಖೇಲಿಫ್ (Immane Khelif)​ ಇದೀಗ ಮತ್ತೊಮ್ಮೆ ವಿವಾದದ ಮೂಲಕ ಮುನ್ನೆಲೆಗೆ ಬಂದಿದ್ದಾರೆ. ಆಗಸ್ಟ್​ 01ರಂದು ವುಮೆನ್ಸ್​​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಇಟಾಲಿ ಮೂಲದ ಬಾಕ್ಸರ್ ಏಂಜಲೀನಾ ಕ್ಯಾರಿನಿ ತಮ್ಮ ಎದುರಾಳಿ ಖೇಲಿಫ್​ ವಿರುದ್ಧದ ಕಾಳಗದಲ್ಲಿ 46 ಸೆಕೆಂಡ್​ಗೆ ಮ್ಯಾಚ್​ ತ್ಯಜಿಸಿ, ಹೊರಬಂದಿದ್ದರು. ನಾಲ್ಕು ರೌಂಡ್​ವರೆಗೂ ಹೋಗಬೇಕಿದ್ದ ಪಂದ್ಯವನ್ನು ಕೇವಲ 2ನೇ ಸುತ್ತಿಗೆ ಅಂತ್ಯಗೊಳಿಸಿದ ಏಂಜೆಲಾ, 'ಇಂತಹ ಸೋಲನ್ನು ನನ್ನಿಂದ ಒಪ್ಪಿಕೊಳ್ಳಲು ಅಸಾಧ್ಯ. ನನ್ನ ಮೂಗಿಗೆ ಬಿದ್ದ ಏಟು ಒಬ್ಬ ಗಂಡಸ್ಸಿನ ಹೊಡೆತದ್ದಂತಿತ್ತು. ಇಂಥ ನೋವನ್ನು ನಾನು ಇಲ್ಲಿಯವರೆಗೂ ಅನುಭವಿಸರಲಿಲ್ಲ' ಎಂದು ಆಟ ಅರ್ಧಕ್ಕೆ ಕೈಬಿಡುವ ಮೂಲಕ ದೊಡ್ಡ ವಿವಾದ ಹುಟ್ಟುಹಾಕಿದ್ದರು. ಇದಕ್ಕೆ ಕಾರಣ ಇಮಾನೆ ಒಬ್ಬ ಪುರುಷ ಎಂಬುದು. ಅಂದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಈ ಸಂಗತಿ ಇದೀಗ ಮತ್ತೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಪ್ಯಾರಿಸ್ ಒಲಿಂಪಿಕ್ಸ್ 2024ರ ಕೊನೆಯವರೆಗೂ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೇಲಿಫ್ ಒಬ್ಬ ಪುರುಷ ಎಂಬ ಆರೋಪಗಳು ವ್ಯಾಪಕವಾಗಿ ಸದ್ದು ಮಾಡಿತ್ತು. ಆಕೆ ಮಹಿಳೆಯಲ್ಲ, ಪುರುಷ ಎಂದು ಸ್ಪರ್ಧೆಗೆ ಇಳಿದಿದ್ದ ಕುಸ್ತಿಪಟುಗಳು ಆರೋಪಿಸಿ, ಈ ಕೂಡಲೇ ಖೇಲಿಫ್​ರನ್ನು ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸದಂತೆ ಒಲಿಂಪಿಕ್​ ಆಡಳಿತ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದರು. ಆದರೆ, ಅದ್ಯಾವುದು ಸಾಧ್ಯವಾಗಲಿಲ್ಲ. ಇದೀಗ ಶಾಕಿಂಗ್​ ವಿಚಾರವೊಂದು ಹೊರಬಿದ್ದಿದ್ದು, ವಾಸ್ತವವಾಗಿ ಖೇಲಿಫ್ ಒಬ್ಬ ಪುರುಷ ಎಂಬುದು ದೃಢವಾಗಿದೆ ಎಂಬ ವೈದ್ಯಕೀಯ ವರದಿ ಸದ್ಯ ಜಾಲತಾಣಗಳಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದೆ.

ಚಿನ್ನದ ಪದಕ ಗೆದ್ದ ಈ ಪುರುಷ ನೆನಪಿದೆಯಾ?

ಈ ವರದಿಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಿಡಿಕಾರಿದ್ದು, ಅಲ್ಜೀರಿಯಾದ ಇಮಾನೆ ಖೇಲಿಫ್​ಗೆ ನೀಡಲಾದ ಚಿನ್ನದ ಪದಕವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಒಲಿಂಪಿಕ್​ ಮಂಡಳಿಗೆ ಟ್ಯಾಗ್​ ಮಾಡಿ ಆಗ್ರಹಿಸಿದ್ದಾರೆ. ಇನ್ನು ರಿಲೇ ಗೈನ್ಸ್​ ಕೂಡ ಪ್ರತಿಕ್ರಿಯಿಸಿ, ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಈ ಪುರುಷ ನೆನಪಿದೆಯಾ? ಈ ಅಲ್ಜೀರಿಯನ್ ಬಾಕ್ಸರ್​ಗೆ ವೃಷಣಗಳು ಮತ್ತು ಎಕ್ಸ್​ವೈ (XY) ಕ್ರೋಮೋಸೋಮ್‌ಗಳಿದೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಆರೋಪಿಸಿದ್ದಾರೆ.

ಏನಿದು 'ಪುರುಷ' ವಿವಾದ?

ಅಸಲಿಗೆ ಅಲ್ಜೀರಿಯಾದ ಇಮಾನೆ ಖೇಲಿಫ್ ಮಹಿಳೆಯಲ್ಲ, ಪುರುಷ. 2023ರ ಒಲಿಂಪಿಕ್ಸ್​ನಲ್ಲಿ ಆಕೆ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲವಾಗಿದ್ದರು. ಹೀಗಿದ್ದಮೇಲೆ ಏಕೆ ಅವರನ್ನು ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಆಡಲು ಅವಕಾಶ ಕೊಡಬೇಕಿತ್ತು? ಎಂದು ಅನೇಕ ಕ್ರೀಡಾಪಟುಗಳು ಖೇಲಿಫ್​ ವಿರುದ್ಧ ಕಿಡಿಕಾರಿದ್ದರು. ಇದಕ್ಕೆಲ್ಲಾ ಒಲಿಂಪಿಕ್ಸ್​ನಲ್ಲಿ ಅವಕಾಶ ಕೊಡಬಾರದು ಎಂಬ ಕೂಗುಗಳು ವ್ಯಾಪಕವಾಗಿ ಕೇಳಿಬಂದಿತ್ತು. ಇದಾದ ಬಳಿಕವೂ ಇಮಾನೆ ವಿರುದ್ಧ ಟೀಕೆಗಳು ಮುಂದುವರೆದಿತ್ತು. ಭಾರೀ ವಿವಾದಗಳ ನಡುವೆಯೂ ಬಾಕ್ಸಿಂಗ್​ ಫೈನಲ್​ ತಲುಪಿದ್ದ ಖೇಲಿಫ್ ಅಂತಿಮ ಕಾಳಗದಲ್ಲಿ ಚಿನ್ನ ಗೆದ್ದು ಮಿಂಚಿದರು.

ಗೆಲುವು ಹಾಗೂ ವಿವಾದದ ಬಗ್ಗೆ ಉತ್ತರಿಸಿದ್ದ ಖೇಲಿಫ್, “ಕಳೆದ ಎಂಟು ವರ್ಷಗಳಿಂದ ಈ ಒಂದು ಸಮಯಕ್ಕಾಗಿ ಕಾದಿದ್ದೆ. ಇದು ನನ್ನ ಕನಸಾಗಿತ್ತು. ಈಗ ನಾನು ಒಲಿಂಪಿಕ್​ ಚಾಂಪಿಯನ್, ಕೊರಳಿನಲ್ಲಿ ಚಿನ್ನವಿದೆ. ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದ ವಿರೋಧಗಳು, ಟೀಕೆಗಳನ್ನು ಗಮನಿಸಿದೆ. ನನ್ನ ಗೆಲುವಿಗೆ ಅವೆಲ್ಲವೂ ಕಾರಣ. ಇದು ಯಶಸ್ಸಿನ ವಿಶೇಷ ಅಭಿರುಚಿ” ಎಂದು ಹೇಳುವ ಮೂಲಕ ತಮ್ಮನ್ನು ಟೀಕಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದರು. ಸದ್ಯ ಈ ವಿವಾದಕ್ಕೆ ಇದೀಗ ಹೊಸ ಟ್ವಿಸ್ಟ್​ ಸಿಕ್ಕಿದ್ದು, ಚಿನ್ನದ ಪದಕ ವಾಪಾಸ್​ ಒಲಿಂಪಿಕ್​ಗೆ ಸೇರ್ಪಡೆಯಾಗಲಿದೆಯೋ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net