ಆಕ್ರಮ ಬೆಟ್ಟಿಂಗ್​ ಆ್ಯಪ್​ ಪ್ರಕರಣ: ಮಾಜಿ ಕ್ರಿಕೆಟರ್​ ಶಿಖರ್​ ಧವನ್​ಗೆ ED ಸಮನ್ಸ್!

photo - 2025-09-04T123551.064
Published on

ಆಕ್ರಮ ಬೆಟ್ಟಿಂಗ್​ ಆ್ಯಪ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಕ್ರಿಕೆಟರ್​ ಶಿಖರ್​ ಧವನ್​ಗೆ ತನಿಖೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ED) ಗುರುವಾರ ಸಮನ್ಸ್​ ನೀಡಿದೆ.

ಅಲ್ಲದೆ,ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

1xBet ಹೆಸರಿನ ಆ್ಯಪ್‌ಗೆ ಸಂಬಂಧಿಸಿದ ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಗುರುವಾರ ದೆಹಲಿಯ ಪ್ರಧಾನ ಕಚೇರಿಯಲ್ಲಿ ವಿಚಾರಣೆಗಾಗಿ ಧವನ್ ಅವರನ್ನು ಏಜೆನ್ಸಿಯ ಮುಂದೆ ಹಾಜರಾಗುವಂತೆ ಕೇಳಲಾಗಿದೆ ಎಂದು ವರದಿ ಉಲ್ಲೇಖಸಿದೆ.

ಆಕ್ರಮ ಬೆಟ್ಟಿಂಗ್​ ಆಪ್ಲಿಕೇಶನ್​ಗಳು ಕೋಟ್ಯಾಂತರ ರೂ. ಮೌಲ್ಯದ ಹಲವಾರು ಜನರನ್ನು ಮತ್ತು ಹೂಡಿಕೆದಾರರನ್ನು ವಂಚಿಸಿದೆ ಅಥವಾ ಭಾರೀ ಪ್ರಮಾಣದ ತೆರಿಗೆ ವಂಚಿಸಿದೆ ಎಂದು ಹೇಳಲಾದ ಇಂತಹ ಹಲವಾರು ಪ್ರಕರಣಗಳಲ್ಲಿ ಸಂಸ್ಥೆ ತನಿಖೆ ನಡೆಸುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net