ಒಂದು ವೇಳೆ ಭಾರತದಲ್ಲಿ ಈ ರೀತಿಯ ಪಿಚ್​ ಇದ್ದಿದ್ದರೆ; ಯುಎಸ್​ಎ ಸ್ಟೇಡಿಯಂಗಳ ಕುರಿತು ಇರ್ಫಾನ್​ ಪಠಾಣ್​ ಸ್ಪೋಟಕ ಹೇಳಿಕೆ

irfan Pathan
Published on

ನವದೆಹಲಿ: ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಶುಭಾರಂಭ ಕಂಡಿದ್ದು, ಐರ್ಲೆಂಡ್​ ವಿರುದ್ಧ 08ವಿಕೆಟ್​ಗಳ ಭರ್ಜರಿ ಜಯಗಳಿಸಿದೆ. ಇನ್ನೂ ಈ ಬಾರಿಯ ಟೂರ್ನಿಯು ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಪಿಚ್​ ವಿಚಾರವಾಗಿ ಹೆಚ್ಚು ಗಮನ ಸೆಳೆದಿದೆ.

ಇನ್ನೂ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿ್ ಈರ್ಪಅಣ್​ ಪಠಾಣ್​, ಇದು ಆಟಗಾರರಿಗೆ ಅಸುರಕ್ಷಿತವಾಗಿದ್ದು, ಒಂದು ವೇಳೆ ಈ ರೀತಿಯ ಪಿಚ್​ ಏನಾದರೂ ಭಾರತದಲ್ಲಿ ಇದ್ದಿದ್ದರೆ ಯಾವುದೇ ಕಾರಣಕ್ಕೂ ಟೂರ್ನಿ ಆಯೋಜನೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನ್ಯೂಯಾರ್ಕ್​ನ ನೌಸ್ಸೆ ಕ್ರೀಡಾಂಗಣ ಬ್ಯಾಟ್ಸ್​ಮ​ನ್​ಗಳಿಗೆ ತುಂಬಾ ಸವಾಲೊಡಿದ್ದು, ಶ್ರೀಲಂಕಾ-ದಕ್ಷಿಣ ಆಫ್ರಿಕಾ ಹಾಗೂ ಭಾರತ-ಯರ್ಲೆಂಡ್​ ನಡುವಿನ ಪಂದ್ಯವೇ ಸಾಕ್ಷಿಯಾಗಿದೆ. ನಾವು ಅಮೆರಿಕಾದಲ್ಲಿ ಕ್ರಿಕೆಟ್​ನಂತಹ ಕ್ರೀಡೆಯನ್ನು ಉತ್ತೇಜಿಸಲು ಬಯಸುತ್ತೇವೆ. ಆದರೆ, ಈ ರೀತಿಯ ಪಿಚ್​ ಆಟಗಾರರಿಗೆ ಸುರಕ್ಷಿತವಲ್ಲ. ಒಂದು ವೇಳೆ ಭಾರತದಲ್ಲಿ ಈ ರೀತಿಯ ಪಿಚ್​ ಇದ್ದರೆ ಅಲ್ಲಿ ಯಾವುದೇ ಕಾರಣಕ್ಕೂ ಪಂದ್ಯ ನಡೆಸುವುದಿಲ್ಲ. ಇಲ್ಲಿ ವಿಶ್ವಕಪ್​ ನಡೆಯುತ್ತಿರುವುದರಿಂದ ಪಿಚ್​ ಬಗ್ಗೆ ಜಾಗ್ರತೆ ವಹಿಸಬೇಕಿದೆ.

ನನ್ನ ಪ್ರಕಾರ ಈ ಪಿಚ್​ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ ಆಡುವುದಕ್ಕೆ ಸೂಕ್ತವಾಗಿಲ್ಲ. ಚೆಂಡು ಬೌನ್ಸ್​ ಆಗುವುದನ್ನು ನೋಡಿದ್ದೇವೆ. ಕೆಲವೊಮ್ಮೆ ಸ್ಕಿಡ್​ ಆಗುತ್ತದೆ. ಇದು ಅಪಾಯಕಾರಿಯಾಗಿದ್ದು, ಆಟಗಾರರು ಗಾಯಕ್ಕೆ ತುತ್ತಾಗುವ ಲಕ್ಷಣಗಳು ಕಾಣುತ್ತವೆ. ಆದ್ದರಿಂದ ನನ್ನ ಪ್ರಕಾರ ಪಿಚ್​ ಬಗ್ಗೆ ಗಮನ ಹರಿಸುವುದು ಸೂಕ್ತ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net