Asia Cup 2025 | ಭಾರತ ತಂಡದ ಅಭಿಮಾನಿಗಳು ದೇಶಭಕ್ತರು, ನಾವು... ಇಂಡೋ- ಪಾಕ್​ ಪಂದ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಅಕ್ರಮ್​ ಮಾತು !

Wasim Akram
Published on

Asia Cup 2025: ಏಷ್ಯಾಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡವು ಉತ್ತಮ ಪ್ರದರ್ಶನ ನೀಡಲಿದೆ ಎಂದು ಪಾಕ್​ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ವಾಹಿನಿಯೊಂದಿಗೆ ಮಾತನಾಡಿದ ಅಕ್ರಮ್​, ಸೆಪ್ಟೆಂಬರ್ 14 ರಂದು ನಡೆಯಲಿರುವ ಭಾರತ ಪಾಕ್​ ಪಂದ್ಯ ಈ ಹಿಂದಿನ ಪಂದ್ಯಗಳಂತೆ ರೋಚಕ ಪಂದ್ಯವಾಗಿರಲಿದ್ದು, ಈ ವೇಳೆ ಒತ್ತಡವನ್ನು ನಿಭಾಯಿಸಬಲ್ಲ ತಂಡವು ಜಯಶಾಲಿಯಾಗಲಿದೆ ಎಂದರು. ಆದರೆ ಪಂದ್ಯವನ್ನು ಆಟಗಾರರು ಮತ್ತು ಅಭಿಮಾನಿಗಳು ಶಿಸ್ತಿನ ಗಡಿ ದಾಟದೆ ಮನರಂಜನೆಯಾಗಿ ನೋಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಭಾರತ ತಂಡದ ಅಭಿಮಾನಿಗಳು ದೇಶಭಕ್ತರಾಗಿದ್ದು, ಅವರ ತಂಡ ಗೆಲ್ಲಬೇಕೆಂದು ಬಯಸಿದಂತೆ, ಪಾಕಿಸ್ತಾನಿ ಅಭಿಮಾನಿಗಳು ಬಯಸುತ್ತಾರೆ. ಭಾರತ ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿರುವವುದರಿಂದ ಗೆಲುವಿನ ನೆಚ್ಚಿನ ತಂಡವಾಗಿದ್ದು, ಆದರೆ ಅಂತಿಮವಾಗಿ ಒತ್ತಡವನ್ನು ನಿಭಾಯಿಸುವ ತಂಡವು ಗೆಲ್ಲುತ್ತದೆ ಎಂದರು.

ಈ ಏಷ್ಯಾಕಪ್​ ಟೂನಿರ್ಯಲ್ಲಿ ಅಭಿಮಾನಿಗಳು ಭಾರತ-ಪಾಕಿಸ್ತಾನ ನಡುವೆ ಅನೇಕ ಮುಖಾಮುಖಿ ಪಂದ್ಯಗಳನ್ನು ನೋಡುವ ಸಾಧ್ಯತೆ ಇದ್ದು, ಅದು ಫೈನಲ್​ ಪಂದ್ಯಕ್ಕೂ ವಿಸ್ತರಣೆಯಾಗಬಹುದು ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net