

ಇಸ್ಲಮಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಲು ನಮ್ಮವರಿಗೆ ಅವಕಾಶ ನೀಡಿದಿದ್ದರೆ ಪಾಕಿಸ್ತಾನವೇನು ಚಿಂತಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಅವಕಾಶ ನೀಡದಿರುವುದು ಭಾರತ ಅಹಂ ಅನ್ನು ತೋರಿಸುತ್ತದೆ. ಪಾಕ್ಗೆ ಅವಕಾಶ ನೀಡದಿರುವುದಕ್ಕೆ ಐಸಿಸಿಗಿಂತ ಬಿಸಿಸಿಐ ಹೆಚ್ಚು ಹಣ ಗಳಿಸುವುದು ಕಾರಣ ಎಂದು ಇಮ್ರಾನ್ ಖಾನ್ ಟೀಕಿಸಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ಸೂಪರ್ ಪವರ್ನಂತೆ ವರ್ತಿಸುವ ಭಾರತದಲ್ಲಿ ಅಹಂ ಎನ್ನುವುದು ತುಂಬಾ ಇದೆ. ಕ್ರಿಕೆಟ್ನಲ್ಲಿ ಇತರ ಯಾವುದೇ ದೇಶಗಳಿಗಿಂತ ಹೆಚ್ಚಿನ ಹಣವನ್ನು ಉತ್ಪಾದಿಸುವ ಅವರ ಸಾಮರ್ಥ್ಯ ಇದಕ್ಕೆ ಕಾರಣ. ಅವರು ಯಾರನ್ನು ಆಡಬೇಕು ಮತ್ತು ಯಾರನ್ನು ಆಡಬಾರದು ಎಂದು ತೀರ್ಮಾನಿಸುವ ಸೂಪರ್ ಪವರ್ನಂತೆ ಒಂದು ರೀತಿಯ ದುರಹಂಕಾರದಲ್ಲಿ ವರ್ತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಇಮ್ರಾನ್ ಹೇಳಿದರು.
ಅಂದಹಾಗೆ 2008ರಲ್ಲಿ ಆರಂಭವಾದ ಮೊದಲ ಐಪಿಎಲ್ ಪಂದ್ಯದ ವೇಳೆ ಬಿಸಿಸಿಐ ಪಾಕಿಸ್ತಾನವನ್ನು ಆಹ್ವಾನಿಸಿತ್ತು. ಆದರೆ, ಅದೇ ವರ್ಷ ಮುಂಬೈ ಮೇಲೆ ನಡೆದ ಉಗ್ರ ದಾಳಿಯ ಬಳಿಕ ಪಾಕಿಸ್ತಾನವನ್ನು ಐಪಿಎಲ್ನಿಂದ ಬ್ಯಾನ್ ಮಾಡಲಾಗಿದೆ. (ಏಜೆನ್ಸೀಸ್)