ಫೈನಲ್​ಗೆ ಮುನ್ನ ಬಲ ಪಕ್ಕದಲ್ಲಿ ನಿಂತ ನಾಯಕರಿಗೆ ಒಲಿಯುತ್ತೆ ಐಸಿಸಿ ಟ್ರೋಫಿ!

icc trophy web
Published on

ಬೆಂಗಳೂರು: ಕಾಕತಾಳೀಯವೋ, ಮೂಢನಂಬಿಕೆಯೋ ಒಟ್ಟಾರೆ ಐಸಿಸಿ ಟ್ರೋಫಿಯು ಫೈನಲ್‌ಗೆ ಮುನ್ನ ತನ್ನ ಬಲಭಾಗದಲ್ಲಿ ನಿಲ್ಲುವ ನಾಯಕರಿಗೆ ಒಲಿಯುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ! ಹೌದು, ಐಸಿಸಿ ಟೂರ್ನಿಗಳಲ್ಲಿ ಫೈನಲ್ ಪಂದ್ಯಕ್ಕೆ ಮುನ್ನಾದಿನ ಉಭಯ ತಂಡಗಳ ನಾಯಕರು ಟ್ರೋಫಿ ಪಕ್ಕದಲ್ಲಿ ನಿಂತು ಪೋಸ್ ನೀಡುವುದು ಇತ್ತೀಚೆಗಿನ ವಾಡಿಕೆ. ಈ ಪೈಕಿ ತನ್ನ ಬಲಭಾಗದಲ್ಲಿ ನಿಂತವರಿಗೆ ಟ್ರೋಫಿ ಒಲಿಯುತ್ತ ಬಂದಿದೆ!

2011 (ಭಾರತ-ಧೋನಿ), 2015 (ಆಸ್ಟ್ರೇಲಿಯಾ-ಮೈಕೆಲ್ ಕ್ಲಾರ್ಕ್), 2019ರ ಏಕದಿನ ವಿಶ್ವಕಪ್ (ಇಂಗ್ಲೆಂಡ್-ಮಾರ್ಗನ್), 2012 (ವೆಸ್ಟ್ ಇಂಡೀಸ್-ಡರೇನ್ ಸ್ಯಾಮ್ಮಿ), 2016ರ (ವೆಸ್ಟ್ ಇಂಡೀಸ್-ಡರೇನ್ ಸ್ಯಾಮ್ಮಿ) ಟಿ20 ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ (ಪಾಕಿಸ್ತಾನ-ಸಫ್ರ್ರಾಜ್ ಅಹ್ಮದ್), 2021ರ (ನ್ಯೂಜಿಲೆಂಡ್-ಕೇನ್ ವಿಲಿಯಮ್ಸನ್) ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗಳಲ್ಲಿ ಟ್ರೋಫಿ ಬಲಭಾಗದಲ್ಲಿ ನಿಂತ ನಾಯಕರಿಗೇ ಅದೃಷ್ಟ ಒಲಿದಿತ್ತು.

ಇದೀಗ 2021ರ ಟಿ20 ವಿಶ್ವಕಪ್‌ನಲ್ಲೂ ಇದು ಪುನರಾವರ್ತನೆಯಾಗಿದ್ದು, ಟ್ರೋಫಿಯ ಬಲಭಾಗದಲ್ಲಿ ನಿಂತಿದ್ದ ಆರನ್ ಫಿಂಚ್‌ಗೆ ಅದೃಷ್ಟ ಒಲಿದಿದೆ. ಹೀಗಾಗಿ ಮುಂದಿನ ಬಾರಿ ಐಸಿಸಿ ಟೂರ್ನಿ ನಡೆದಾಗ ಫೈನಲ್‌ಗೆ ಮುನ್ನ ಟ್ರೋಫಿಯ ಬಲಭಾಗದಲ್ಲಿ ನಿಲ್ಲಲು ಭಾರಿ ಜಟಾಪಟಿಯೇ ಏರ್ಪಡಬಹುದೇನೋ?!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net