

ದುಬೈ: ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗುರುವಾರ ವಾರ್ಷಿಕ ಪರಿಷ್ಕರಣೆಗೆ ಒಳಪಡಿಸಿರುವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ವಾರ್ಷಿಕ ಪರಿಷ್ಕರಣೆಯ ಬಳಿಕ ಭಾರತ 1 ಅಂಕ ಗಳಿಸಿದ್ದರೆ, ನ್ಯೂಜಿಲೆಂಡ್ 2 ಅಂಕ ಗಳಿಸಿದೆ. ಇದರ ನಡುವೆಯೂ ಭಾರತ 121 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 120 ಅಂಕದೊಂದಿಗೆ 2ನೇ ಸ್ಥಾನದಲ್ಲಿ ಉಳಿದಿದೆ. ಅಗ್ರ 2 ಸ್ಥಾನದಲ್ಲಿರುವ ಭಾರತ-ನ್ಯೂಜಿಲೆಂಡ್ ತಂಡಗಳೇ ಜೂನ್ 18ರಿಂದ ಇಂಗ್ಲೆಂಡ್ನ ಸೌಥಾಂಪ್ಟನ್ನಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಎದುರಾಗಲಿರುವುದು ವಿಶೇಷವಾಗಿದೆ.
2017-18ನೇ ಸಾಲಿನ ಫಲಿತಾಂಶವನ್ನು ಕೈಬಿಟ್ಟು ರ್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಐಸಿಸಿ ತಿಳಿಸಿದೆ. ಜತೆಗೆ ಮೇ 2020ರ ಬಳಿಕ ನಡೆದ ಪಂದ್ಯಗಳ ಫಲಿತಾಂಶವನ್ನು ಶೇಕಡ 100 ಮತ್ತು ಅದಕ್ಕೂ ಮೊದಲಿನ ಪಂದ್ಯಗಳ ಫಲಿತಾಂಶವನ್ನು ಶೇಕಡ 50 ಗಣನೆಗೆ ತೆಗೆದುಕೊಂಡು ರ್ಯಾಂಕಿಂಗ್ ಪರಿಷ್ಕರಿಸಲಾಗಿದೆ. ಪರಿಷತ ರ್ಯಾಂಕಿಂಗ್ ಅನ್ವಯ ಇಂಗ್ಲೆಂಡ್ (109 ಅಂಕ) 3ನೇ ಸ್ಥಾನಕ್ಕೇರಿದರೆ, ಆಸ್ಟ್ರೆಲಿಯಾ (108) 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. 2017-18ನೇ ಸಾಲಿನಲ್ಲಿ ಇಂಗ್ಲೆಂಡ್ ತಂಡ 0&4 ರಿಂದ ಆಸ್ಟ್ರೆಲಿಯಾಗೆ ಶರಣಾಗಿತ್ತು. ಇದೀಗ ಆ ಫಲಿತಾಂಶ ರ್ಯಾಂಕಿಂಗ್ನಲ್ಲಿ ಪರಿಗಣಿಸಲ್ಪಟ್ಟಿಲ್ಲ.
ಪಾಕಿಸ್ತಾನ (94) 5ನೇ ಸ್ಥಾನಕ್ಕೇರಿದ್ದು, ವೆಸ್ಟ್ ಇಂಡೀಸ್ ತಂಡ (84) 6ನೇ ಸ್ಥಾನ ಗಳಿಸಿದೆ. ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ರ್ಯಾಂಕಿಂಗ್ ಇತಿಹಾಸದಲ್ಲಿಯೇ 2ನೇ ಬಾರಿಗೆ ಕಡಿಮೆ ರ್ಯಾಂಕಿಂಗ್ (7ನೇ ಸ್ಥಾನ) ಗಳಿಸಿದೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್: 1. ಭಾರತ &121 ಅಂಕ (+1), 2. ನ್ಯೂಜಿಲೆಂಡ್& 120 ಅಂಕ (+2), 3. ಇಂಗ್ಲೆಂಡ್ 109 ಅಂಕ (+3), 4. ಆಸ್ಟ್ರೆಲಿಯಾ -108 ಅಂಕ (&5), 5. ಪಾಕಿಸ್ತಾನ&94 ಅಂಕ (+3), 6. ವೆಸ್ಟ್ ಇಂಡೀಸ್ 84 (+3), 7. ದಣ ಆಫ್ರಿಕಾ(8 (&9), 8. ಶ್ರೀಲಂಕಾ-78 ಅಂಕ (+5), 9. ಬಾಂಗ್ಲಾದೇಶ-46 ಅಂಕ (+5), 10. ಜಿಂಬಾಬ್ವೆ -35 (+8).
ವಿಂಡೀಸ್ ತಂಡ, ಬಾಂಗ್ಲಾದೇಶ ತಂಡವನ್ನು 2&0 ಯಿಂದ, ಶ್ರೀಲಂಕಾ ಎದುರು 0&0 ಯಿಂದ ಡ್ರಾ ಸಾಧಿಸಿತ್ತು. 2013ರ ಬಳಿಕ ವೆಸ್ಟ್ ಇಂಡೀಸ್ ತಂಡ ಐಸಿಸಿ ರ್ಯಾಂಕಿಂಗ್ನಲ್ಲಿ ಉತ್ತಮ ಸಾಧನೆ ಮಾಡಿದೆ. ದಕ್ಷಿಣ ಆಫ್ರಿಕಾ ತಂಡ (80) ಹಾಗೂ ಶ್ರೀಲಂಕಾ ತಂಡ (78) ತಂಡಗಳು ತಲಾ ಒಂದು ಸ್ಥಾನ ಕುಸಿತ ಕಂಡಿದ್ದು, ಕ್ರಮವಾಗಿ 7ನೇ ಹಾಗೂ 8ನೇ ಸ್ಥಾನ ಅಲಂಕರಿಸಿವೆ. 5 ಪಾಯಿಂಟ್ಸ್ ಕಳೆದುಕೊಂಡಿರುವ ಬಾಂಗ್ಲಾದೇಶ (46) ಹಾಗೂ 8 ಪಾಯಿಂಟ್ಸ್ ಸಂಗ್ರಹಿಸಿರುವ ಜಿಂಬಾಬ್ವೆ (35) ನಂತರದ ಸ್ಥಾನದಲ್ಲಿವೆ.
*ಕಿವೀಸ್ ನಂ.1 ಅವಕಾಶ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ಗೂ ಮುನ್ನ ನ್ಯೂಜಿಲೆಂಡ್ ತಂಡ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಜೂನ್ 2ರಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 2 ಪಂದ್ಯಗಳ ಸರಣಿಯಲ್ಲಿ ಕಿವೀಸ್ ಗೆದ್ದರೆ ನಂ.1 ಸ್ಥಾನಕ್ಕೇರಲಿದ್ದು, ಭಾರತ ಎರಡನೇ ಸ್ಥಾನಕ್ಕೆ ಕುಸಿಯಲಿದೆ.