

ಲಂಡನ್: ಲಾಕ್ಡೌನ್ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡಿರುವ ಬುಕ್ಕಿಗಳು ಕ್ರಿಕೆಟ್ ಆಟಗಾರರನ್ನು ಸಂಪರ್ಕಿಸಿ ದುರುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಲೆಕ್ಸ್ ಮಾರ್ಷಲ್ ತಿಳಿಸಿದ್ದಾರೆ.
ಮಾರ್ಚ್ 15ರಂದು ಪಾಕಿಸ್ತಾನದಲ್ಲಿ ನಡೆದ ಸೂಪರ್ ಲೀಗ್ ಪಂದ್ಯದ ನಂತರ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆದಿಲ್ಲ. ಎಲ್ಲ ಆಟಗಾರರು ಲೌಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದಾರೆ. ಇದರಿಂದ ಅವರು ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅವರು ದಿ ಗಾರ್ಡಿಯನ್'ಗೆ ಸಂದರ್ಶನ ನೀಡಿದ್ದಾರೆ.
ಪಂದ್ಯಾವಳಿ ಇಲ್ಲದೆ ಆಟಗಾರರ ಆದಾಯ ಕುಸಿತವಾಗಿದೆ. ಅಲ್ಲದೆ ಕಡಿಮೆ ಆದಾಯ ಪಡೆಯುವ ಕ್ರಿಕೆಟ್ ಆಟಗಾರನ್ನು ಸಂಪರ್ಕಿಸಿ ಅವರನ್ನು ಶೋಷಣೆ ಮಾಡಲು ಮುಂದಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕರೊನಾ ವೈರಸ್ ಹಾವಳಿಯಿಂದ ಕ್ರಿಕೆಟ್ ಆಟ ನಿಂತಿರಬಹುದು. ಆದರೆ ಆದರೆ ಭ್ರಷ್ಟಾಚಾರದಲ್ಲಿ ತೊಡಗಿರುವ ಬುಕ್ಕಿಗಳು ಆಟಗಾರರ ಸಂಪರ್ಕ ಸಾಧಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕ ಬುಕ್ಕಿಗಳ ಮೇಲೆ ಸಂಪೂರ್ಣ ನಿಗಾವಹಿಸಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)