VIDEO| ವಿಶ್ವಕಪ್​ ಆಡದಿದ್ದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಪಾಕಿಸ್ತಾನದ​ ಮಾಜಿ ಬ್ಯಾಟ್ಸ್​ಮನ್​

Javed miandad
Published on

ಲಾಹೋರ್​: ಭಾರತ ತಂಡವು ಪಾಕಿಸ್ತಾನಕ್ಕೆ ಬಂದು ದ್ವಿಪಕ್ಷೀಯ ಸರಣಿ ಆಡುವವರೆಗೂ ನಮ್ಮ ದೇಶದ ಕ್ರಿಕೆಟ್​ ಮಂಡಳಿಯವರು ಐಸಿಸಿ ನಡೆಸುವ ಎಲ್ಲಾ ತರಹದ ಟೂರ್ನಮೆಂಟ್​ಗಳಲ್ಲಿ ಭಾಗಿಯಾಗಬಾರದು ಎಂದು ಮಾಜಿ ಬ್ಯಾಟ್ಸ್​ಮನ್​ ಜಾವೇದ್​ ಮಿಯಾಂದಾದ್​ ಹೇಳಿದ್ಧಾರೆ.

ಐಸಿಸಿ ಬಿಡುಗಡೆ ಮಾಡಿರುವ ಏಕದಿನ ವಿಶ್ಕಪವವ ವೇಳಾಪಟ್ಟಿ ಪ್ರಕಾರ ಅಕ್ಟೋಬರ್​ 15ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಾಗಲಿದ್ದಾವೆ. ಭಾರತ ತಂಡವು ಪಾಕಿಸ್ತಾನದ ಜೊತೆಗೆ ದ್ವಿಪಕ್ಷೀಯ ಸರಣಿ ಆಡಬೇಕು ಎಂದು ಆಗ್ರಹಿಸಿದ್ಧಾರೆ.

ಪರಿಣಾಮ ಬೀರುವುದಿಲ್ಲ

2012 ಹಾಗೂ 2016ರ ಟಿ20 ವಿಶ್ವಕಪ್​ ಸಮಯದಲ್ಲಿ ಪಾಕಿಸ್ತಾನ ತಂಡವು ಭಾರತಕ್ಕೆ ಬಂದಿತ್ತು. ಇದೀಗ ಭಾರತದ ಸರದಿಯಾಗಿದ್ದು, ಬಿಸಿಸಿಐ ತನ್ನ ಆಟಗಾರರನ್ನು ದ್ವಿಪಕ್ಷೀಯ ಸರಣಿ ಆಡಲು ತನ್ನ ಆಟಗಾರರನ್ನು ಕಳಿಸಲಿ. ಒಂದು ವೇಳೆ ನಾನು ನಿರ್ಧಾರ ತೆಗೆದುಕೊಳ್ಳುವ ಅವಕಾಶ ಇದ್ದಿದ್ದರೆ ಪಾಕಿಸ್ತಾನವನ್ನು ಭಾರತಕ್ಕೆ ಕಳುಹಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನಾವು ಭಾರತದ ಜೊತೆ ದ್ವಿಪಕ್ಷೀಯ ಸರಣಿ ಆಡಲು ಸಿದ್ದರಿದ್ದೇವೆ. ಆದರೆ, ಅಲ್ಲಿನ ಕ್ರಿಕೆಟ್​ ಮಂಡಳಿಯವರು ಈವರೆಗೂ ಪ್ರತಿಕ್ರಿಯಿಸಿಲ್ಲ. ಪಾಕಿಸ್ತಾನ ಕ್ರಿಕೆಟ್​ ಈಗ ದೊಡ್ಡದಾಗಿದೆ. ನಮ್ಮ ಬಳಿಯೂ ಗುಣಮಟ್ಟದ ಆಟಗಾರರಿದ್ದಾರೆ. ನಾವು ಭಾರತಕ್ಕೆ ಆಡಲು ಹೋಗದಿದ್ದರೆ ಅದು ನಮ್ಮ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.

ಭಾರತ 2008ರಲ್ಲಿ ಕಡೆಯದಾಗಿ ಏಷ್ಯಾ ಕಪ್​ ಆಡಲು ಪಾಕಿಸ್ತಾನಕ್ಕೆ ಬಂದಿತ್ತು. ಆ ನಂತರ ಉಭಯ ದೇಶಗಳ ನಡುವಿನ ಸಂಬಂಧದಿಂದ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ಬ್ಯಾಟ್ಸ್​ಮನ್​ ಜಾವೇದ್​ ಮಿಯಾಂದಾದ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net