ನಿವೃತ್ತಿ ಸಮಯದಲ್ಲಿ ನನ್ನ ಕೊಠಡಿ ಪದಕಗಳಿಂದ ತುಂಬಿರಬೇಕು

chi
Published on

ಗುವಾಹಟಿ: ಬ್ಯಾಡ್ಮಿಂಟನ್‌ನಿಂದ ನಿವೃತ್ತಿ ಹೊಂದುವ ವೇಳೆಗೆ ನನ್ನ ಮನೆಯ ಒಂದು ಕೊಠಡಿ ತುಂಬುವಷ್ಟು ಪದಕ ಜಯಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ಭಾರತದ ಸ್ಟಾರ್ ಡಬಲ್ಸ್ ಆಟಗಾರ ಉಡುಪಿ ಮೂಲದ ಚಿರಾಗ್ ಶೆಟ್ಟಿ ಹೇಳಿದ್ದಾರೆ.

ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿಯಾಗಿ ಎಲ್ಲ ಟೂರ್ನಿಗಳಲ್ಲಿ ಗೆಲುವು ಸಾಧಿಸಲು ಬಯಸುತ್ತೇನೆ. ಕೆಲವು ವರ್ಷಗಳ ಬಳಿಕ ನಿವೃತ್ತಿ ಸಹ ಹೊಂದುತ್ತೇವೆ. ಆ ಸಮಯದಲ್ಲಿ ನನ್ನ ಕೊಠಡಿ ಪದಕಗಳಿಂದ ತುಂಬಿರಬೇಕು. ಅದರ ಬಗ್ಗೆ ಸಾಕಷ್ಟು ಉತ್ಸುಕನಾಗಿದ್ದೇನೆ ಎಂದು ಚಿರಾಗ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಒಲಿಂಪಿಕ್ಸೃ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್, ವರ್ಲ್ಡ್ ಟೂರ್ ಫೈನಲ್ಸ್ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವುದರ ಜತೆಗೆ ಇನ್ನೂ ಹಲವಾರು ಟೂರ್ನಿಗಳಲ್ಲಿ ಯಶಸ್ಸು ಸಾಧಿಸಬೇಕೆಂಬ ಆಸೆಯಿದೆ ಎಂದು ತಿಳಿಸಿದ್ದಾರೆ. ನಾವು ವಿಶ್ವದ ಯಾವುದೇ ಜೋಡಿಯನ್ನು ಸೋಲಿಸಬಹುದು ಆದರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವುದು ಮುಖ್ಯ ಗುರಿಯಾಗಿದೆ. ಟೂರ್ನಿಯ ಲಿತಾಂಶ ನಮ್ಮ ಶ್ರೇಯಾಂಕವನ್ನು ನಿರ್ಧರಿಸುತ್ತದೆ ಆದ್ದರಿಂದ ವಿಶ್ವ ನಂಬರ್ ಒನ್ ಜೋಡಿ ಎನಿಸುವುದಕ್ಕಿಂತ ವಿಶ್ವ ಚಾಂಪಿಯನ್ ಆಗಿರುವುದಕ್ಕೆ ಸಂತೋಷಪಡುತ್ತೇನೆ ಎಂದು ಚಿರಾಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net