

ದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್(Zaheer Khan) ಮತ್ತು ಅವರ ಪತ್ನಿ ಇತ್ತೀಚಿಗೆ ಮಹಾರಾಷ್ಟ್ರದ ಶಿರಡಿಯ ಶ್ರೀ ಸಾಯಿಬಾಬಾರ ಸಾಮಾಧಿಗೆ ಭೇಟಿ ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಜಹೀರ್, ನನ್ನ ಜನ್ಮಸ್ಥಳ ಶ್ರೀರಾಮಪುರ ಹೀಗಾಗಿ, ಶಿರಡಿಯೊಂದಿಗೆ ನನಗೆ ನಿಕಟ ಸಂಬಂಧವಿದೆ ಎಂದು ಹೇಳಿದ್ದಾರೆ.
ಲಕ್ಷಾಂತರ ಮಂದಿಯ ಪುಣ್ಯ ಸ್ಥಳವಾದ ಶ್ರೀ ಶಿರಿಡಿ ಸಾಯಿಬಾಬಾ ಮಂದಿರಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ರಾಜಕಾರಣಿಗಳು, ವ್ಯಾಪರಸ್ಥರು, ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಸೇರಿದಂತೆ ಸಾಮಾನ್ಯ ನಾಗರಿಕರು ಭೇಟಿ ನೀಡುತ್ತಾರೆ. ಅದರಂತೆ ಇತ್ತೀಚಿಗೆ ಜಹೀರ್ ಖಾನ್ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಜಹೀರ್, "ನನ್ನ ಜನ್ಮಸ್ಥಳ ಶ್ರೀರಾಮಪುರ, ಹಾಗಾಗಿ ಶಿರಡಿಯೊಂದಿಗೆ ನನಗೆ ನಿಕಟ ಸಂಬಂಧವಿದೆ. ನಾನು ಹಲವಾರು ಬಾರಿ ಇಲ್ಲಿ ಕ್ರಿಕೆಟ್ ಆಡಿದ್ದೇನೆ. ನಾನು ಪ್ರತಿಬಾರಿ ಇಲ್ಲಿ ಕ್ರಿಕೆಟ್ ಆಡುವಾಗ ಖಂಡಿತವಾಗಿಯೂ ಇಲ್ಲಿಗೆ ಬರುತ್ತೇನೆ. ಇಲ್ಲಿ ಪಂದ್ಯಾವಳಿಗಳು ನಮಗೆ ಅವಕಾಶ ಸಿಕ್ಕಾಗ, ನಾವು ಖಂಡಿತವಾಗಿಯೂ ಬಾಬಾನನ್ನು ನೋಡಲು ಬರುತ್ತೇವೆ'' ಎಂದು ಹೇಳಿದ್ದಾರೆ.
ಇನ್ನೂ ಜಹೀರ್ ಖಾನ್ ವಿಷಯಕ್ಕೆ ಬರುವುದಾದರೆ, ಭಾರತೀಯ ಕ್ರಿಕೆಟ್ನ ಅತ್ಯತ್ತುಮ ಬೌಲರ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಜಹೀರ್ ಖಾನ್, ಟೆಸ್ಟ್ ಕ್ರಿಕೆಟ್ನಲ್ಲಿ ಕಪೀಲ್ದೇವ್ ನಂತರ ಎರಡನೇ ಅತ್ಯಂತ ಬೌಲರ್ ಎನಿಸಿದ್ದಾರೆ. ಕುಮಾರ್ ಸಂಗರ್ಕಾರ, ಸ್ಮಿತ್, ಸನತ್ ಜಯಸೂರ್ಯ ಮತ್ತು ಮಾಥ್ಯು ಹೇಡನ್ ಅವರ ದಾಖಲೆಗಳನ್ನು ಮುರಿದಿದ್ದಾರೆ,(ಏಜೆನ್ಸೀಸ್).