ಟೆನಿಸ್​ ಆಡಿದ್ದರೆ ಇನ್ನಷ್ಟು ಹೆಚ್ಚಿನ ಯಶ ಕಾಣುತ್ತಿದ್ದೆ ಎಂದ ಸೈನಾ ನೆಹ್ವಾಲ್​!

web saina
Published on

ನವದೆಹಲಿ: "ನಾನು ಬ್ಯಾಡ್ಮಿಂಟನ್​ಗಿಂತ ಟೆನಿಸ್​ ರ್ಯಾಕೆಟ್​ ಹಿಡಿದಿದ್ದರೆ ಕ್ರೀಡಾಪಟುವಾಗಿ ಇನ್ನಷ್ಟು ಹೆಚ್ಚಿನ ಯಶಸ್ಸು ಕಾಣುತ್ತಿದ್ದೆ' ಎಂದು ಭಾರತದ ಅನುಭವಿ ಷಟ್ಲರ್​ ಸೈನಾ ನೆಹ್ವಾಲ್​ ಹೇಳಿದ್ದಾರೆ.

ಬ್ಯಾಡ್ಮಿಂಟನ್​ನಲ್ಲಿ ಒಲಿಂಪಿಕ್ಸ್​ ಪದಕ, ವಿಶ್ವ ನಂ. 1 ಪಟ್ಟದಂಥ ಪ್ರಮುಖ ಸಾಧನೆಗಳನ್ನು ಮಾಡಿರುವ ನಡುವೆಯೂ 34 ವರ್ಷದ ಸೈನಾ, "ಹೆತ್ತವರು ನನ್ನನ್ನು ಟೆನಿಸ್​ ಕೋಚಿಂಗ್​ಗೆ ಹಾಕಿದ್ದರೆ ನಾನು ಇನ್ನಷ್ಟು ಉತ್ತಮ ನಿರ್ವಹಣೆ ತೋರುತ್ತಿದ್ದೆ ಎಂಬುದು ನನಗೆ ಆಗಾಗ ಅನಿಸುತ್ತಿರುತ್ತದೆ. ಟೆನಿಸ್​ನಲ್ಲಿ ಹೆಚ್ಚಿನ ಹಣವಿದೆ ಮತ್ತು ನನಗೆ ಹೆಚ್ಚಿನ ಬಲವೂ ಇದೆ' ಎಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net