

ಇಂಗ್ಲೆಂಡ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಕೊಟ್ಟ ಭಾರತೀಯ ಕ್ರಿಕೆಟ್ ತಂಡದ ಓಪನಿಂಗ್ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್, 74 ಎಸೆತಗಳಲ್ಲಿ 80 ರನ್ ಕಲೆಹಾಕುವ ಮೂಲಕ ಶತಕದಿಂದ ವಂಚಿತರಾದರು. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಕೇಳಲಾದ ಹಲವು ಪ್ರಶ್ನೆಗಳಿಗೆ ಜೈಸ್ವಾಲ್ ನೀಡಿದ ಉತ್ತರ ಹೀಗಿದೆ.
ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಶತಕವನ್ನು ಸಿಡಿಸಲು ಸೆಣಸಾಡಿದ ಸ್ಪೋಟಕ ಬ್ಯಾಟ್ಸ್ಮನ್ ಜೈಸ್ವಾಲ್ ಆಂಗ್ಲರ ವಿರುದ್ಧ 74 ಎಸೆತಗಳಲ್ಲಿ 80 ರನ್ ಗಳಿಸುವ ಮೂಲಕ ಯಶಸ್ವಿ ಪ್ರದರ್ಶನ ನೀಡಿ ಪೆವಿಲಿಯನ್ ಹಾದಿ ಹಿಡಿದರು.
ಇನ್ನು ತನ್ನ ಪ್ರದರ್ಶನದ ಬಗ್ಗೆ ಮಾತನಾಡಿದ ಜೈಸ್ವಾಲ್, "ನನಗೆ ಜೋ ರೂಟ್ ಬೌಲಿಂಗ್ ಮಾಡಲಿದ್ದಾರೆ ಎಂಬುದು ಮೊದಲೇ ತಿಳಿದಿತ್ತು. ಹಾಗಾಗಿ ಅವರ ದಾಳಿಗೆ ನಾನು ಸಿದ್ಧನಾಗಿದ್ದೆ. ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೆ ಮತ್ತು ಕೆಲವೊಮ್ಮೆ ನಾನು ತಪ್ಪು ಮಾಡಬಹುದು. ಅದನ್ನು ಸರಿಪಡಿಸಿಕೊಳ್ಳಲು ಶ್ರಮಿಸುತ್ತಿದ್ದೇನೆ. ನಾನು ಇನ್ನೂ ಕಲಿಯುವ ಹಂತದಲ್ಲಿದ್ದೇನೆ" ಎಂದು ಹೇಳಿದರು.
"ನಮ್ಮ ತಂಡಕ್ಕೆ ಉತ್ತಮ ಸ್ಟಾರ್ಟ್ ಕೊಡಬೇಕು ಹಾಗೂ ಒಳ್ಳೆಯ ಕೊಡುಗೆ ನೀಡಬೇಕು ಎಂದು ಯೋಚಿಸುತ್ತಿದ್ದೆ. ನಾನು ಮಾಡುವ ತಪ್ಪುಗಳಿಂದಲೇ ಕಲಿಯುವ ಪ್ರಯತ್ನದಲ್ಲಿದ್ದೀನಿ" ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು,(ಏಜೆನ್ಸೀಸ್).