VIDEO: ಎಂಎಸ್​ ಧೋನಿಗೆ ಅಗ್ರಕ್ರಮಾಂಕದಲ್ಲಿ ಆಡುವ ಸಾಮರ್ಥ್ಯವಿತ್ತು ಎಂದ ಸೌರವ್​ ಗಂಗೂಲಿ

dhoni and gangully for web
Published on

ಕೋಲ್ಕತ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿಗೆ ಮಂಗಳವಾರ 39ನೇ ಹುಟ್ಟುಹಬ್ಬದ ಸಂಭ್ರಮ. ವಿಶ್ವದ ಶ್ರೇಷ್ಠ ಫಿನಿಷರ್​ ಎಂದು ಹೆಸರಾಗಿದ್ದಾರೆ ಧೋನಿ. ಮಧ್ಯಮಕ್ರಮಾಂಕದಲ್ಲಿ ರಾಷ್ಟ್ರೀಯ ತಂಡಕ್ಕೆ ಶಕ್ತಿಯಾಗಿರುವ ಧೋನಿಗೆ ಅಗ್ರಕ್ರಮಾಂಕದಲ್ಲೂ ಆಡುವ ಸಾಮರ್ಥ್ಯ ಇತ್ತು, ಜತೆಗೆ ಅವರಿಗೆ ಆ ಜಾಗದಲ್ಲಿ ಆಡಿಸುವ ಮನಸು ನನಗಿತ್ತು ಎಂದು ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ. ಬಿಸಿಸಿಐ ಟ್ವಿಟರ್​ನಲ್ಲಿ ಟೆಸ್ಟ್​ ತಂಡದ ಆರಂಭಿಕ ಮಯಾಂಕ್​ ಅಗರ್ವಾಲ್​ ಜತೆ ನಡೆದ ಪ್ರಶ್ನೋತ್ತರದ ವೇಳೆ ಗಂಗೂಲಿ ಈ ವಿಚಾರ ಹಂಚಿಕೊಂಡಿದ್ದಾರೆ.

ಧೋನಿ ಕೇವಲ ಫಿನಿಷರ್​ ಅಲ್ಲ, ಅವರೊಬ್ಬರ ವಿಶ್ವ ಶ್ರೇಷ್ಠ ಆಟಗಾರ. ಪ್ರತಿಯೊಬ್ಬರು ಅವರೊಬ್ಬ ಬೆಸ್ಟ್​ ಫಿನಿಷರ್​ ಎನ್ನುತ್ತಾರೆ. ಅವರು ಅಗ್ರಕ್ರಮಾಂಕದಲ್ಲೂ ಸೈ ಎನಿಸಿಕೊಂಡ ಆಟಗಾರ ಎಂದು ಗಂಗೂಲಿ ಹೇಳಿದ್ದಾರೆ. 2004ರ ಡಿಸೆಂಬರ್​ 23 ರಂದು ನಡೆದ ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಧೋನಿ, ಬಳಿಕ ಪಾಕಿಸ್ತಾನ ವಿರುದ್ಧ ಮೂರನೇ ಕ್ರಮಾಂಕದಲ್ಲೇ 148 ರನ್​ ಸಿಡಿಸಿದರು ಎಂದು ಗಂಗೂಲಿ ಮೆಲುಕು ಹಾಕಿದ್ದಾರೆ. ಒತ್ತಡವನ್ನು ಧೋನಿ ಉತ್ತಮವಾಗಿ ನಿಭಾಯಿಸಿದ್ದಾರೆ. ಅವರೊಬ್ಬ ವಿಶೇಷ ಆಟಗಾರ. ಅಂತ ಆಟಗಾರನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಖುಷಿ ಇದೆ. ಜತೆಗೆ ನನ್ನ ಜವಾಬ್ದರಿಯೂ ಆಗಿತ್ತು ಎಂದಿದ್ದಾರೆ ದಾದಾ.

2019ರ ಏಕದಿನ ವಿಶ್ವಕಪ್​ ಬಳಿಕ ಧೋನಿ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಭಾರತದ ತಂಡದ ಹಾಲಿ ಹಾಗೂ ಮಾಜಿ ಆಟಗಾರರು ಧೋನಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ ವಿಡಿಯೋ ಪ್ರಕಟಿಸುವ ಮೂಲಕ ಧೋನಿಗೆ ಶುಭಾಶಯ ಕೋರಿದೆ. ಸಿಎಸ್​ಕೆ ತಂಡದ ಸದಸ್ಯ ಡ್ವೇನ್​ ಬ್ರಾವೊ, ಧೋನಿ ಕುರಿತು ರಚಿಸಿರುವ ಹೆಲಿಕಾಪ್ಟರ್​ ಹಾಡು ಈಗಾಗಲೇ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net