ಸಿಂಧು, ಲಕ್ಷ್ಯಸೇನ್​ಗೆ ಹೈಲೋ ಓಪನ್​ ಕಿರೀಟ

ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು ಹಾಗೂ ಯುವ ತಾರೆ ಲಕ್ಷ್ಯಸೇನ್ ಭಾನುವಾರ ಮುಕ್ತಾಯಗೊಂಡ ಹೈಲೋ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ-ಪುರುಷರ ಸಿಂಗಲ್ಸ್​ನಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿದರು. ವಿಶ್ವ ನಂ.8 ಸಿಂಧು 21-12, 21-14 ನೇರ ಗೇಮ್​ಗಳಿಂದ ವಿಶ್ವ ನಂ.25 ಲೈನ್​ ಹೋಜ್​ಮಾರ್ಕ್​ ಕರ್ಜೆಲ್ಡ್​ರನ್ನು ಮಣಿಸಿದರು. ಈ ಮೂಲಕ ಹಾಲಿ ವರ್ಷ 2ನೇ ಹಾಗೂ ವೃತ್ತೀಜಿವನದ 7ನೇ ಬಿಡಬ್ಲುಎಫ್​ ಟೂರ್​ ಪ್ರಶಸ್ತಿ ಒಲಿಸಿಕೊಂಡರು. ಕಳೆದ ವಾರ ಫ್ರೆಂಚ್​ ಓಪನ್​ನಲ್ಲಿ ರನ್ನರ್​ ಅಪ್​ ಆಗಿದ್ದ 31 ವರ್ಷದ ಸಿಂಧು, ಇದಕ್ಕೆ ಮುನ್ನ ಜಪಾನ್​ ಸೂಪರ್​ ಟೂರ್ನಿಯಲ್ಲಿ ಚಾಂಪಿಯನ್​ ಆಗಿದ್ದರು.
ಲಕ್ಷ್ಯಸೇನ್-ಪಿವಿ ಸಿಂಧು
ಲಕ್ಷ್ಯಸೇನ್-ಪಿವಿ ಸಿಂಧು ಏಜೆನ್ಸಿ
Published on: 

ಸಾರ್​ಬ್ರೂಕನ್​: ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು ಹಾಗೂ ಯುವ ತಾರೆ ಲಕ್ಷ್ಯಸೇನ್ ಭಾನುವಾರ ಮುಕ್ತಾಯಗೊಂಡ ಹೈಲೋ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ-ಪುರುಷರ ಸಿಂಗಲ್ಸ್​ನಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿದರು. ವಿಶ್ವ ನಂ.8 ಸಿಂಧು 21-12, 21-14 ನೇರ ಗೇಮ್​ಗಳಿಂದ ವಿಶ್ವ ನಂ.25 ಲೈನ್​ ಹೋಜ್​ಮಾರ್ಕ್​ ಕರ್ಜೆಲ್ಡ್​ರನ್ನು ಮಣಿಸಿದರು. ಈ ಮೂಲಕ ಹಾಲಿ ವರ್ಷ 2ನೇ ಹಾಗೂ ವೃತ್ತೀಜಿವನದ 7ನೇ ಬಿಡಬ್ಲುಎಫ್​ ಟೂರ್​ ಪ್ರಶಸ್ತಿ ಒಲಿಸಿಕೊಂಡರು. ಕಳೆದ ವಾರ ಫ್ರೆಂಚ್​ ಓಪನ್​ನಲ್ಲಿ ರನ್ನರ್​ ಅಪ್​ ಆಗಿದ್ದ 31 ವರ್ಷದ ಸಿಂಧು, ಇದಕ್ಕೆ ಮುನ್ನ ಜಪಾನ್​ ಸೂಪರ್​ ಟೂರ್ನಿಯಲ್ಲಿ ಚಾಂಪಿಯನ್​ ಆಗಿದ್ದರು.

ಪುರುಷರ ವಿಭಾಗದಲ್ಲಿ ಲಕ್ಷ್ಯಸೇನ್​ 21-7, 21-10 ರಿಂದ 4ನೇ ಶ್ರೇಯಾಂಕಿತ ಜೋನಾಥನ್​ ಕ್ರಿಸ್ಟಿ ಎದುರು ಜಯ ಸಾಧಿಸಿ, ಹಾಲಿ ವರ್ಷ ಮೊದಲ ಪ್ರಶಸ್ತಿ ಒಲಿಸಿಕೊಂಡರು.