VIDEO | 16 ವರ್ಷಗಳ ಬಳಿಕ ಬಾರ್ಸಿಲೋನಾ ಕ್ಲಬ್‌ಗೆ ಮೆಸ್ಸಿ ಗುಡ್‌ಬೈ, ಅಭಿಮಾನಿಗಳಿಂದ ಪ್ರತಿಭಟನೆ

messi barsi
Published on

ಬಾರ್ಸಿಲೋನಾ: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಸ್ಪೇನ್‌ನ ಪ್ರತಿಷ್ಠಿತ ುಟ್‌ಬಾಲ್ ಕ್ಲಬ್ ಬಾರ್ಸಿಲೋನಾ ಜತೆಗಿನ 2 ದಶಕಗಳ ಸಖ್ಯವನ್ನು ತೊರೆಯಲು ನಿರ್ಧರಿಸಿದ್ದಾರೆ. 33 ವರ್ಷದ ಮೆಸ್ಸಿ ತಂಡವನ್ನು ತ್ಯಜಿಸಲು ಬಯಸಿರುವ ಬಗ್ಗೆ ಬಾರ್ಸಿಲೋನಾ ಕ್ಲಬ್ ಮಂಗಳವಾರ ದೃಢಪಡಿಸಿದೆ. ಈ ಮುನ್ನ ಮೆಸ್ಸಿ ಕ್ಲಬ್ ಪರವಾಗಿಯೇ ವೃತ್ತಿಜೀವನವನ್ನು ಕೊನೆಗೊಳಿಸಲಿದ್ದಾರೆ ಎನ್ನಲಾಗಿತ್ತು.

ಹಾಲಿ ಫುಟ್‌ಬಾಲ್ ಋತುವಿನಲ್ಲಿ ಒಂದೂ ಪ್ರಶಸ್ತಿ ಗೆಲ್ಲಲು ವಿಲವಾಗಿರುವ ಬಾರ್ಸಿಲೋನಾ ಕ್ಲಬ್ ಇತ್ತೀಚೆಗೆ ಚಾಂಪಿಯನ್ಸ್ ಲೀಗ್ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಬೇಯರ್ನ್ ಮ್ಯೂನಿಚ್ ವಿರುದ್ಧ 2-8ರಿಂದ ಹೀನಾಯ ಸೋಲು ಕಂಡಿತ್ತು. ಇದು ಕ್ಲಬ್ ಇತಿಹಾಸ ಮತ್ತು ಮೆಸ್ಸಿ ವೃತ್ತಿಜೀವನದ ಅತ್ಯಂತ ಕೆಟ್ಟ ವರ್ಷವಾಗಿದೆ. 2004ರಲ್ಲಿ ಮೆಸ್ಸಿ ಕ್ಲಬ್ ಸೇರಿದ ಬಳಿಕ 2007-08ರಲ್ಲಷ್ಟೇ ವರ್ಷವಿಡೀ ಒಂದೂ ಪ್ರಶಸ್ತಿ ಜಯಿಸಿರಲಿಲ್ಲ.

ದಾಖಲೆಯ 6 ಬ್ಯಾಲನ್ ಡಿಓರ್ ಪ್ರಶಸ್ತಿ ಜಯಿಸಿರುವ ಮೆಸ್ಸಿ, ಬಾರ್ಸಿಲೋನಾ ಪರ 16 ವರ್ಷಗಳ ವೃತ್ತಿಜೀವನದಲ್ಲಿ ವಿಶ್ವದ ಸ್ಟಾರ್ ಆಟಗಾರರಾಗಿ ಬೆಳೆದಿದ್ದು ಮಾತ್ರವಲ್ಲದೆ ತಂಡಕ್ಕೆ 10 ಸ್ಪಾನಿಷ್ ಲೀಗ್ ಮತ್ತು 4 ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಲು ನೆರವಾಗಿದ್ದಾರೆ. ಕ್ಲಬ್ ಪರ 739 ಪಂದ್ಯಗಳಲ್ಲಿ 634 ಗೋಲು ಬಾರಿಸಿದ್ದಾರೆ.

ಅಭಿಮಾನಿಗಳಿಂದ ಪ್ರತಿಭಟನೆ

ಮೆಸ್ಸಿ ಬಾರ್ಸಿಲೋನಾ ಕ್ಲಬ್ ತ್ಯಜಿಸುವ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಅವರ ನಿರ್ಧಾರದ ಬಗ್ಗೆ ಬೇಸರಗೊಂಡಿರುವ ನೂರಾರು ಅಭಿಮಾನಿಗಳು ನಗರದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ‘ವಿ ಲವ್ ಮೆಸ್ಸಿ, ಮೆಸ್ಸಿ ಸ್ಟೇ, ಮೆಸ್ಸಿ ಸ್ಟೇ’ ಎಂಬ ಘೋಷಣೆಯೊಂದಿಗೆ ಬಾರ್ಸಿಲೋನಾ ಸ್ಟೇಡಿಯಂ ಹೊರಗೆ ನೂರಾರು ಜನರು ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net