ಏಷ್ಯಾಕಪ್‌ನಿಂದ ಹಸರಂಗ ಸೇರಿ ಲಂಕಾದ ಪ್ರಮುಖ ನಾಲ್ವರು ಆಟಗಾರರು ಔಟ್

sl
Published on

ಕೊಲಂಬೊ: ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ಒಂದೂ ದಿನ ಮುಂಚಿತವಾಗಿ ಶ್ರೀಲಂಕಾ ತಂಡ ಆಟಗಾರರ ಪಟ್ಟಿ ಪ್ರಕಟಿಸಲಾಗಿದ್ದು, ಗಾಯ ಹಾಗೂ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ದುಶ್ಮಂತ್ ಚಮೀರಾ, ದಿಲ್‌ಷಾನ್ ಮಧುಶಂಕ, ಲಹಿರು ಕುಮಾರ ಹಾಗೂ ವನಿಂದು ಹಸರಂಗ ನಾಲ್ವರು ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ.

ಅನುಭವಿ ಹಿರಿಯ ಆಟಗಾರರಾದ ಏಂಜೆಲೋ ಮ್ಯಾಧ್ಯೂಸ್, ದಿನೇಶ್ ಚಾಂಡಿಮಾಲ್ 15 ಆಟಗಾರರ ನಡುವೆ ಸ್ಥಾನ ಪಡೆಯುವಲ್ಲಿ ವಿಲವಾಗಿದ್ದಾರೆ.ಆಲ್ರೌಂಡರ್ ದಸುನ್ ಶನಕ ತಂಡ ಮುನ್ನಡೆಸಲಿದ್ದಾರೆ. ಸಿಂಹಳೀಯರ ತಂಡ ಗುರುವಾರ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ತಂಡ: ದಸುನ್ ಶನಕ (ನಾಯಕ), ಪಥುವ್ ನಿಸ್ಸಂಕಾ, ದಿಮುತ್ ಕರುಣರತ್ನೆ, ಕುಸಲ್ ಜನಿತ್ ಪೆರೇರಾ, ಕುಸಲ್ ಮೆಂಡಿಸ್ (ಉಪನಾಯಕ-ವಿ.ಕೀ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ , ಸಧೀರ ಸಮರವಿಕ್ರಮ (ವಿ.ಕೀ), ಮಹೀಶ್ ತೀಕ್ಷಣ, ದುನಿತ್ ವೆಲ್ಲಲಾಂಗೆ, ಮಥೀಷ ಪಥೀರಣ, ಕಸುನ್ ರಜಿತ,ದುಶನ್ ಹೇಮಂತ್, ಬಿನುರಾ ೆರ್ನಾಂಡೊ ಹಾಗೂ ಪ್ರಮೋದ್ ಮಧುಶಾನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net