

ಬ್ರಿಜ್‌ಟೌನ್: ಆರಂಭಿಕ ಶೈ ಹೋಪ್ (82* ರನ್, 39 ಎಸೆತ, 4 ಬೌಂಡರಿ, 8 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಐಸಿಸಿ ಟಿ20 ವಿಶ್ವಕಪ್ ಸೂಪರ್- 8 ಹಂತದ 2ನೇ ಪಂದ್ಯದಲ್ಲಿ ಅಮೆರಿಕ ಎದುರು 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಗ್ರೂಪ್-2ರಲ್ಲಿ ಸೆಮೀಸ್‌ಗೇರಲು ಮೂರು ತಂಡಗಳ (ವಿಂಡೀಸ್, ದ.ಆಫ್ರಿಕಾ, ಇಂಗ್ಲೆಂಡ್) ನಡುವೆ ತ್ರಿಕೋನ ಸ್ಫರ್ಧೆ ಏರ್ಪಟ್ಟಿದೆ.
ಕೆನ್ಸಿಂಗ್‌ಟನ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಆತಿಥೇಯಯ ಕಾದಾಟದಲ್ಲಿ ಟಾಸ್ ಸೋತ ಅಮೆರಿಕ ಬ್ಯಾಟಿಂಗ್‌ಗೆ ಇಳಿಯಿತು. ಆಂಡ್ರೆ ರಸೆಲ್ (31ಕ್ಕೆ 3) ಹಾಗೂ ರೋಸ್ಟನ್ ಚೇಸ್ (19ಕ್ಕೆ 3) ಬಿಗಿ ದಾಳಿಗೆ ಸಿಲುಕಿ 19.5 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ವೆಸ್ಟ್ ಇಂಡೀಸ್ 10.5 ಓವರ್‌ಗಳಲ್ಲಿ 1 ವಿಕೆಟ್‌ಗೆ 130 ರನ್‌ಗಳಿಸಿ, 9.1 ಓವರ್ ಇರುವಂತೆಯೇ ಗೆಲುವು ದಾಖಲಿಸಿತು. ಇದರೊಂದಿಗೆ ರೋವ್ಮನ್ ಪೊವೆಲ್ ಪಡೆ ರನ್‌ರೇಟ್‌ನಲ್ಲೂ ಭಾರಿ ಸುಧಾರಣೆ ಕಂಡಿದೆ. ಜತೆಗೆ ಗ್ರೂಪ್-2ರ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಅಮೆರಿಕ: 19.5 ಓವರ್‌ಗಳಲ್ಲಿ 128 (ಟೇಲರ್ 2, ಆಂಡ್ರೀಸ್ 29, ನಿತೀಶ್ 20, ಜೋನ್ಸ್ 11, ಮಿಲಿಂದ್ 19, ಶಾಡ್ಲೆ 18, ಅಲಿ ಖಾನ್ 14*, ರಸೆಲ್ 31ಕ್ಕೆ 3, ರೋಸ್ಟನ್ ಚೇಸ್ 19ಕ್ಕೆ 3, ಜೋಸ್ೆ 31ಕ್ಕೆ 2).
ವೆಸ್ಟ್ ಇಂಡೀಸ್: 10.5 ಓವರ್‌ಗಳಲ್ಲಿ 1 ವಿಕೆಟ್‌ಗೆ 130 (ಶೈ ಹೋಪ್ 82*,ಜಾನ್ಸನ್ ಚಾರ್ಲ್ಸ್ 15, ಪೂರನ್ 27*, ಹರ್ಮೀತ್ 18ಕ್ಕೆ 1). ಪಂದ್ಯಶ್ರೇಷ್ಠ: ರೋಸ್ಟನ್ ಚೇಸ್.
17: ನಿಕೋಲಸ್ ಪೂರನ್ (17) ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್ ಎನಿಸಿದರು. ಕ್ರಿಸ್ ಗೇಲ್ (16 ಸಿಕ್ಸರ್, 2012), ಶೇನ್ ವ್ಯಾಟ್ಸನ್ (15 ಸಿಕ್ಸರ್, 2012) ಹಿಂದಿನ ಸಾಧಕರು.
412. ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳು ದಾಖಲಾದ ಆವೃತ್ತಿ ಇದಾಗಿದೆ. 2021ರಲ್ಲಿ 405 ಸಿಕ್ಸರ್ ಸಿಡಿದಿದ್ದು ಹಿಂದಿನ ಗರಿಷ್ಠ.