ಭಾರತದಲ್ಲಿ 3 ವರ್ಷಗಳ ಬಳಿಕ ಸ್ಪರ್ಧಿಸಲು ಸಜ್ಜಾದ ನೀರಜ್​ ಚೋಪ್ರಾ

web neeraj
Published on

ನವದೆಹಲಿ: ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಮೂರು ವರ್ಷಗಳ ಬಳಿಕ ತವರು ನೆಲದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಮೇ 12ರಿಂದ 15ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ 27ನೇ ರಾಷ್ಟ್ರೀಯ ಫೆಡರೇಷನ್​ ಕಪ್​ ಅಥ್ಲೆಟಿಕ್ಸ್​ ಕೂಟದಲ್ಲಿ ನೀರಜ್​ ಭಾಗವಹಿಸಲಿರುವುದನ್ನು ಬುಧವಾರ ಖಚಿತಪಡಿಸಿದ್ದಾರೆ.

26 ವರ್ಷದ ತಾರೆ ನೀರಜ್​ ಮೇ 10ರಂದು ದೋಹಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಡೈಮಂಡ್​ ಲೀಗ್​ನ ಮೊದಲ ಚರಣದಲ್ಲಿ ಸ್ಪರ್ಧಿಸುವ ಮೂಲಕ ಹಾಲಿ ವರ್ಷ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ. ಬಳಿಕ ಭಾರತಕ್ಕೆ ಆಗಮಿಸಿ ಫೆಡರೇಷನ್​ ಕಪ್​ನಲ್ಲೂ ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿರುವ ಮತ್ತೋರ್ವ ಜಾವೆಲಿನ್​ ಎಸೆತದ ತಾರೆ ಕಿಶೋರ್​ ಜೆನಾ ಕೂಡ ಭಾಗವಹಿಸಲಿದ್ದಾರೆ ಎಂದು ಭಾರತೀಯ ಅಥ್ಲೆಟಿಕ್ಸ್​ ಒಕ್ಕೂಟ ತಿಳಿಸಿದೆ.

ಕಳೆದ ವರ್ಷ ಹಾಂಗ್​ರೆೌ ಏಷ್ಯನ್​ ಗೇಮ್ಸ್​ನಲ್ಲಿ ನೀರಜ್​ ಚಿನ್ನ ಗೆದ್ದಿದ್ದರೆ, ಕಿಶೋರ್​ ರಜತ ಪದಕ ಗೆದ್ದುಕೊಂಡಿದ್ದರು. ನಂತರದಲ್ಲಿ ನೀರಜ್​ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ.

2021ರ ಮಾರ್ಚ್​ 17ರಂದು ನೀರಜ್​ ಚೋಪ್ರಾ ೆಡರೇಷನ್​ ಕಪ್​ನಲ್ಲೇ ಕೊನೆಯದಾಗಿ ಭಾರತದಲ್ಲಿ ಸ್ಪರ್ಧಿಸಿದ್ದರು. ಆಗ 87.80 ಮೀಟರ್​ ಎಸೆತದೊಂದಿಗೆ ಚಿನ್ನ ಜಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net