ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಇಂದು ಮಹತ್ವದ ಪಂದ್ಯ

hockey web
Published on

ಭುವನೇಶ್ವರ: ಹಾಲಿ ಚಾಂಪಿಯನ್ ಭಾರತ ತಂಡ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯ ತನ್ನ ನಿರ್ಣಾಯಕ ಪಂದ್ಯದಲ್ಲಿ ಶನಿವಾರ ಪೋಲೆಂಡ್ ತಂಡವನ್ನು ಎದುರಿಸಲಿದೆ. ಆತಿಥೇಯ ಭಾರತ ತಂಡ ಬಿ ಗುಂಪಿನಿಂದ ಎಂಟರ ಘಟ್ಟಕ್ಕೇರಲು ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಬೇಕಿದೆ.

ಟೂರ್ನಿಯ ಫೇವರಿಟ್ ಎನಿಸಿಕೊಂಡಿರುವ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್ ತಂಡಕ್ಕೆ ಶರಣಾಗಿದ್ದರೆ, ಗುರುವಾರ ಕೆನಡ ಎದುರು ದಾಖಲೆಯ 13-1 ರಿಂದ ಗೆಲುವು ಕಂಡಿತ್ತು. ಬಿ ಗುಂಪಿನ ಅಗ್ರಸ್ಥಾನಿ ಫ್ರಾನ್ಸ್ ತಂಡ ಈಗಾಗಲೇ ಎಂಟರ ಘಟ್ಟ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದರೆ, ಭಾರತ ತಂಡ ಪೋಲೆಂಡ್ ಎದುರು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದರೂ, ಕನಿಷ್ಠ ಸಮಬಲದ ಹೋರಾಟ ಅಗತ್ಯವಿದೆ. ಡ್ರಾಗೊಂಡರೆ ವಿವೇಕ್ ಸಾಗರ್ ಪ್ರಸಾದ್ ಪಡೆ ಗೋಲು ಲೆಕ್ಕಾಚಾರದಲ್ಲಿ ನಾಕೌಟ್‌ಗೇರಲಿದೆ.

ಉಪನಾಯಕ ಹಾಗೂ ಸ್ಟಾರ್ ಡ್ರಾೃಗ್ ಫ್ಲಿಕರ್ ಸಂಜಯ್ ಕುಮಾರ್, ಉತ್ತಮ್ ಸಿಂಗ್, ಅರೈಜಿತ್ ಸಿಂಗ್, ಕೆನಡ ಎದುರು ಭರ್ಜರಿ ನಿರ್ವಹಣೆ ತೋರಿದ್ದರು. ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಕೆನಡ ತಂಡಗಳು ಎದುರಾಗಲಿವೆ.

ಪಂದ್ಯ ಆರಂಭ: ರಾತ್ರಿ: 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net