

ನವದೆಹಲಿ: ಭಾರತದ ಪುರುಷ-ಮಹಿಳಾ ತಂಡದ ಕೇಸರಿ ಬಣ್ಣದ ಹೊಸ ಜೆರ್ಸಿ ವಿವಾದಕ್ಕೊಳಗಾಗಿರುವ (
Saffron Hockey Jersey Row
) ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಮುಂಬರುವ ಹಾಕಿ ವಿಶ್ವಕಪ್ನಲ್ಲಿ 50 ವರ್ಷಗಳ ಪದಕ ಬರ ನೀಗಿಸುವತ್ತ ಗಮನಹರಿಸಬೇಕಾಗಿದೆ ಎಂದು ಮಾಜಿ ಗೋಲು ಕೀಪರ್ ಪಿಆರ್ ಶ್ರೀಜೇಶ್ ಅಭಿಪ್ರಾಯಪಟ್ಟಿದ್ದಾರೆ.
ಎಂದಿನ ನೀಲಿಗೆ ಬದಲಾಗಿ ಜೆರ್ಸಿ ಬಣ್ಣವನ್ನು ಕೇಸರಿಗೆ ಬದಲಾಯಿಸಿರುವುದನ್ನೂ ಬೆಂಬಲಿಸಿರುವ ಶ್ರೀಜೇಶ್, "ನೀಲಿ ಬಣ್ಣವನ್ನು ಕೈಬಿಡಲು ಗೋಚರತೆಯೇ ಕಾರಣವಾಗಿದ್ದರೆ, ಭಾರತ ತಂಡ ಇನ್ನೆಂದೂ ನೀಲಿ ಬಣ್ಣದ ಜೆರ್ಸಿ ಧರಿಸುವುದು ಬೇಡ. ನೀಲಿ ಜೆರ್ಸಿ ಬೇಡ ಎಂದು ಅದರ ಬದಲಾವಣೆಗೆ ಆಟಗಾರರೂ ಒಪ್ಪಿದ್ದರೆ ಮತ್ತೆ ಇದರ ಬಗ್ಗೆ ಚರ್ಚೆಗಳು ಅನಗತ್ಯ. ಬಣ್ಣ ಕೇಸರಿಯಾಗಿದೆ ಎಂಬ ಕಾರಣಕ್ಕಾಗಿ ಅದನ್ನು ವಿರೋಧಿಸುವುದು ಕೂಡ ಸರಿಯಲ್ಲ' ಎಂದೂ ಅವರು ಹೇಳಿದ್ದಾರೆ.
2014, 2018ರ ವಿಶ್ವಕಪ್ಗಳಲ್ಲಿ ಭಾರತ ತಂಡ ಭಿನ್ನ ಜೆರ್ಸಿ ಧರಿಸಿ ಆಡಿತ್ತು. ಹೀಗಾಗಿ ವಿಶ್ವಕಪ್ಗೆ ಮುನ್ನ ಜೆರ್ಸಿ ಬದಲಾವಣೆ ಹೊಸದೇನು ಅಲ್ಲ ಎಂದೂ ಅವರು ತಿಳಿಸಿದ್ದಾರೆ. ಕೇಸರಿ ಬಣ್ಣದ ಜೆರ್ಸಿಗೆ ಈ ಮುನ್ನ ಭಾರತ ತಂಡದ ಹಲವು ಮಾಜಿ ನಾಯಕರು, ದಿಗ್ಗಜ ಆಟಗಾರರು ವಿರೋಧ ವ್ಯಕ್ತಪಡಿಸಿದ್ದರು. 1975ರ ಹಾಕಿ ವಿಶ್ವಕಪ್ ಗೆಲುವಿನ ಬಳಿಕ ಭಾರತ ಒಮ್ಮೆಯೂ ಕನಿಷ್ಠ ಸೆಮಿೈನಲ್ ಕೂಡ ಪ್ರವೇಶಿಸಿಲ್ಲ.