Hockey: ಭಾರತ ಮಹಿಳಾ ಹಾಕಿ ಕೋಚ್​ ಹರೇಂದ್ರ ಸಿಂಗ್​ ದಿಢೀರ್​ ಪದತ್ಯಾಗ!

Hockey: ಭಾರತ ಮಹಿಳಾ ಹಾಕಿ ಕೋಚ್​ ಹರೇಂದ್ರ ಸಿಂಗ್​ ದಿಢೀರ್​ ಪದತ್ಯಾಗ!
Hockey: ಭಾರತ ಮಹಿಳಾ ಹಾಕಿ ಕೋಚ್​ ಹರೇಂದ್ರ ಸಿಂಗ್​ ದಿಢೀರ್​ ಪದತ್ಯಾಗ!
Published on
ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್​ ಹರೇಂದ್ರ ಸಿಂಗ್ (Harendra Singh)​ ವೈಯಕ್ತಿಕ ಕಾರಣ ನೀಡಿ ಸೋಮವಾರ ತಮ್ಮ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ಸಲ್ಲಿಸಿದ್ದಾರೆ. ತಕ್ಷಣದಿಂದಲೇ ಅನ್ವಯಿಸುವಂತೆ ತಾನು ಹುದ್ದೆಯಿಂದ ಕೆಳಗಿಳಿಯಲಿದ್ದೇನೆ ಎಂದು ಹರೇಂದ್ರ, ಹಾಕಿ ಇಂಡಿಯಾಗೆ ( Hockey India ) ಕಳುಹಿಸಿರುವ ಇ-ಮೇಲ್​ನಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಭಾರತ ಮಹಿಳಾ ತಂಡ 2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಪಡೆದ ವೇಳೆ ಮುಖ್ಯ ಕೋಚ್​ ಆಗಿದ್ದ ಡಚ್​ ತಂತ್ರಗಾರ ಸ್ಜೋರ್ಡ್​ ಮರಿಜ್ನೆ ಮತ್ತೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮರಿಜ್ನೆ 2021ರ ಆಗಸ್ಟ್​ನಲ್ಲಿ ಪದತ್ಯಾಗ ಮಾಡಿದ್ದರು. 2024ರ ಏಪ್ರಿಲ್​ನಲ್ಲಿ ಹರೇಂದ್ರ ಹುದ್ದೆಗೇರಿದ್ದರು. ಅದಕ್ಕೆ ಮುನ್ನ ಅವರು 2016ರಲ್ಲಿ ತವರಿನ ಹಾಕಿ ವಿಶ್ವಕಪ್​ ಗೆದ್ದ ಭಾರತದ ಜೂನಿಯರ್​ ಪುರುಷರ ತಂಡದ ಕೋಚ್​ ಆಗಿದ್ದರು.

ಭಾರತ ಮಹಿಳಾ ಹಾಕಿ ತಂಡದ ಕಳೆದೊಂದು ವರ್ಷದ ನಿರ್ವಹಣೆ ನೀರಸವಾಗಿದ್ದು, ಪ್ರೊ ಲೀಗ್​ನಲ್ಲಿ (
FIH Pro League ) ಆಡಿದ 16 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದಿತ್ತು ಮತ್ತು ಮುಂದಿನ ಆವೃತ್ತಿಗೆ ಅರ್ಹತೆ ಪಡೆಯಲು ಕೂಡ ವಿಫಲವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net