ಆಕ್ಲೆಂಡ್: ನವನೀತ್ ಕೌರ್ (6, 13ನೇ ನಿಮಿಷ) ಮತ್ತು ದೀಪಿಕಾ ಸೆಹ್ರಾವತ್ (14, 18) ಸಿಡಿಸಿದ ಅವಳಿ ಗೋಲುಗಳ ಬಲದಿಂದ ಭಾರತ ತಂಡ ಎಫ್ಐಎಚ್ ಮಹಿಳಾ ಹಾಕಿ ನೇಷನ್ಸ್ ಕಪ್ (FIH Hockey Women''s Nations Cup) ಟೂರ್ನಿಯ ಸೆಮಿಫೈನಲ್ನಲ್ಲಿ ಚಿಲಿ ವಿರುದ್ಧ 6-0 ಅಂತರದಿಂದ ಗೆಲುವು ದಾಖಲಿಸಿದೆ. ಭಾರತ ತಂಡ ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಪ್ರಶಸ್ತಿ ಗೆದ್ದ ತಂಡ ಮುಂದಿನ ವರ್ಷದ ಮಹಿಳಾ ಪ್ರೊ ಲೀಗ್ಗೆ ಬಡ್ತಿ ಪಡೆಯಲಿದೆ.