ಪ್ರೊ ಲೀಗ್: ನಾಳೆ ಭಾರತ-ಪಾಕ್ ತಂಡಗಳ ಮುಖಾಮುಖಿ

ಪ್ರೊ ಲೀಗ್: ಇಂದು ಭಾರತ-ಪಾಕ್ ಮುಖಾಮುಖಿ
ಪ್ರೊ ಲೀಗ್: ಇಂದು ಭಾರತ-ಪಾಕ್ ಮುಖಾಮುಖಿ
Published on
ಲಂಡನ್: ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ನೆದರ್ಲೆಂಡ್ ವಿರುದ್ಧ ರೋಚಕ ಗೆಲುವಿನೊಂದಿಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಭಾರತ ತಂಡ ಎಫ್ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯ ಲಂಡನ್ ಚರಣಕ್ಕೆ ಸಜ್ಜಾಗಿದೆ. ಏಷ್ಯನ್ ಚಾಂಪಿಯನ್ ಭಾರತ ತಂಡ ಲಂಡನ್ ಚರಣದ ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮಂಗಳವಾರ ಕಣಕ್ಕಿಳಿಯಲಿದೆ.
ಎರಡು ವರ್ಷಗಳ ನಂತರ ಉಭಯ ತಂಡಗಳು ಮೊದಲ ಸಲ ಮುಖಾಮುಖಿ ಆಗಲಿವೆ. ರೋಟ್ಟೆರ್‌ಡಾಮ್ ಚರಣದಲ್ಲಿ ಆಡಿದ 4ರಲ್ಲಿ ತಲಾ 2 ಸೋಲು-ಗೆಲುವು ಕಂಡಿರುವ ಭಾರತ ಆಡಿರುವ 12ರಲ್ಲಿ 2 ಜಯ, 3 ಡ್ರಾ, 7 ಸೋಲಿನೊಂದಿಗೆ ಅಂಕಪಟ್ಟಿಯ 8ನೇ ಸ್ಥಾನದಲ್ಲಿದೆ. 2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕೊನೆಯದಾಗಿ ಪಾಕ್ ವಿರುದ್ಧ ಆಡಿದ್ದ ಭಾರತ, 2-1ರಿಂದ ಗೆದ್ದು ಪ್ರಶಸ್ತಿ ಒಲಿಸಿಕೊಂಡಿತ್ತು. ಕಳೆದ ವಾರ ವಿಶ್ವ ನಂ. 2 ನೆದರ್ಲೆಂಡ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡಗಳ ಎದುರು ಗೆಲುವು ಸಾಧಿಸಿರುವ ಭಾರತಕ್ಕೆ ಈ ಟೂರ್ನಿ ಮುಂಬರುವ ವಿಶ್ವಕಪ್, ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ ಕ್ವಾಲಿಫೈಯರ್‌ಗೆ ಸಿದ್ಧತೆ ಎನಿಸಿದೆ.
ಭಾರತ ತಂಡ ಲಂಡನ್ ಚರಣದಲ್ಲಿ ಆತಿಥೇಯ ಇಂಗ್ಲೆಂಡ್, ಪಾಕ್ ವಿರುದ್ಧ ತಲಾ 2 ಪಂದ್ಯ ಆಡಲಿದೆ. ಆಡಿರುವ 12ರಲ್ಲೂ ಸೋತಿರುವ ಪಾಕಿಸ್ತಾನ ಅಂಕಪಟ್ಟಿಯ 9ನೇ ಸ್ಥಾನದಲ್ಲಿದ್ದು, ಹಿಂಬಡ್ತಿಯ ಭೀತಿಯಲ್ಲಿದೆ.
ಆರಂಭ: ರಾತ್ರಿ 7.00, ನೇರಪ್ರಸಾರ: ಜಿಯೋ ಹಾಟ್‌ಸ್ಟಾರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net