

ಸ್ಯಾನ್ಟಿಯಾಗೊ: ಭಾರತ ತಂಡ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್ (Junior Women''s World Cup) ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ನಮೀಬಿಯಾ ಎದುರು ಗೋಲಿನ ಸುರಿಮಳೆ ಹರಿಸುವ ಮೂಲಕ 13-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
ಕನಿಕಾ ಸಿವಾಚ್ (12, 30, 45ನೇ ನಿಮಿಷ) ಮತ್ತು ಹೀನಾ ಬಾನೊ (35, 35, 45) ಹ್ಯಾಟ್ರಿಕ್ ಗೋಲು ಸಿಡಿಸಿದರೆ, ಸಾ ರಾಣಾ (10, 23) ಎರಡು ಗೋಲು ಬಾರಿಸಿದರು. ಸೋನಮ್ (14), ಬಿನಿಮಾ ಧಾನ್ (14), ಸಾ ಶುಕ್ಲಾ (27), ಇಶಿಕಾ (36), ಮನೀಷಾ (60) ತಲಾ 1 ಗೋಲು ಗಳಿಸಿದರು.
ಭಾರತ ತಂಡ ಬುಧವಾರ ತನ್ನ 2ನೇ ಪಂದ್ಯದಲ್ಲಿ ಜರ್ಮನಿ ವಿರುದ್ಧ ಆಡಲಿದೆ.