ಹೈವೋಲ್ಟೇಜ್ ಕದನದಲ್ಲಿ ಪಾಕ್​ನ ಬಗ್ಗುಬಡಿದ ಭಾರತ: ಹಾಕಿ ವಿಶ್ವಕಪ್‌ 2ನೇ ಸುತ್ತಿಗೆ ಭರ್ಜರಿ ಎಂಟ್ರಿ | Hockey World Cup

ಪಾಕ್​ನ ಬಗ್ಗುಬಡಿದ ಭಾರತ ಹಾಕಿ ತಂಡ
ಪಾಕ್​ನ ಬಗ್ಗುಬಡಿದ ಭಾರತ ಹಾಕಿ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಆಮ್‌ಸ್ಟರ್‌ವೀನ್‌ನಲ್ಲಿ ಹೈವೋಲ್ಟೇಜ್ ಡ್ರಾಮಾ
  • ಪಾಕಿಸ್ತಾನವನ್ನು ಮಣಿಸಿ ಹಾಕಿ ವಿಶ್ವಕಪ್‌ 2ನೇ ಸುತ್ತಿಗೆ ಜಿಗಿದ ಭಾರತ
Hockey World Cup: ಆಮ್‌ಸ್ಟರ್‌ವೀನ್‌ನ ವಾಗನರ್ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5-3 ಅಂತರದಲ್ಲಿ ಬಗ್ಗುಬಡಿದ ಭಾರತ ಹಾಕಿ ಪಡೆ, ಎದುರಾಳಿ ವಿರುದ್ಧ ತನ್ನ 3,842 ದಿನಗಳ ಸುದೀರ್ಘ ಅಪರಾಜಿತ ಓಟವನ್ನು ಯಶಸ್ವಿಯಾಗಿ ಮುಂದುವರಿಸಿದೆ. 
ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಬಿದ್ದ ಕ್ಯಾಪ್ಟನ್​ ಹರ್ಮನ್‌ಪ್ರೀತ್ ಸಿಂಗ್ ಪಡೆ, ಈ ಗೆಲುವಿನೊಂದಿಗೆ ಹಾಕಿ ಟೂರ್ನಿಯ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.  ರಕ್ಷಣಾತ್ಮಕ ಆಟದಿಂದ ಹೊರಬಂದು ಆರಂಭದಿಂದಲೇ ಸತತ ದಾಳಿ ನಡೆಸಿದ ಭಾರತಕ್ಕೆ 5ನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್ ಮೂಲಕ ನಾಯಕನಿಂದ ಮೊದಲ ಗೋಲು ಒಲಿಯಿತು. 

ಅಭಿಷೇಕ್ ಮಿಂಚು

11ನೇ ನಿಮಿಷದಲ್ಲಿ ತಮ್ಮ ಅದ್ಭುತ ಸ್ಕಿಲ್​ ತೋರಿದ ಅಭಿಷೇಕ್, ಫೀಲ್ಡ್ ಗೋಲು ಬಾರಿಸಿ ತಂಡವನ್ನು 2-0 ಅಂತರಕ್ಕೆ ಕೊಂಡೊಯ್ದರು. ಇದು ಪಾಕ್​ ಎದುರು ರೋಚಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಪಂದ್ಯದಲ್ಲಿ ಇನ್ನೂ ನಾವಿದ್ದೇವೆ ಎಂದು ತೋರಿಸಲು ಮುಂದಾದ ಪಾಕಿಸ್ತಾನ, ಹನ್ನಾನ್ ಶಾಹಿದ್ ಮತ್ತು ಸುಫ್ಯಾನ್ ಖಾನ್ ಬಾರಿಸಿದ ಗೋಲುಗಳ ನೆರವಿನಿಂದ ಭಾರತಕ್ಕೆ ಸವಾಲು ಹಾಕಿತು.

ನಿರ್ಣಾಯಕ ಕ್ಷಣ

ಒತ್ತಡದ ಸಮಯದಲ್ಲೂ ತಾಳ್ಮೆ ಕಾಯ್ದುಕೊಂಡ ಭಾರತಕ್ಕೆ ಹಾರ್ದಿಕ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ 3-2 ಅಂತರದ ರೋಚಕ ಜಯ ತಂದುಕೊಟ್ಟಿತು. ಈ ಕ್ಷಣವನ್ನು ಸಂಭ್ರಮಿಸಿದ ಹರ್ಮನ್​ಪ್ರೀತ್​ ಪಡೆಗೆ ಸಂಭ್ರಮಕ್ಕೆ ಕೊನೆಯಿಲ್ಲ ಎನ್ನುವಂತಾಯಿತು. ಪೂಲ್ 'ಡಿ'ಯಲ್ಲಿ ಜಯಗಳಿಸಿದ ಇಂಗ್ಲೆಂಡ್ ಜತೆಗೆ ಭಾರತವೂ ಎರಡನೇ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಮುಂದಿನ ಪಂದ್ಯಗಳಲ್ಲಿ ನೆದರ್‌ಲ್ಯಾಂಡ್ಸ್ ಹಾಗೂ ಅರ್ಜೆಂಟೀನಾ ಅಥವಾ ನ್ಯೂಜಿಲೆಂಡ್​ ವಿರುದ್ಧ ಭಾರತ ಗೆಲುವಿಗಾಗಿ ಪೈಪೋಟಿ ಕೊಡಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net