ಹರ್ಮಾನ್‌ಪ್ರೀತ್ ಸಿಂಗ್ (26) ಗೋಲಿನೊಂದಿಗೆ ಮೊದಲಾರ್ಧದ ಮುಕ್ತಾಯಕ್ಕೆ ಭಾರತ 2-1ರ ಮುನ್ನಡೆ ಕಂಡಿತು. ವಿರಾಮದ ನಂತರ ದೊರೆತ ಎರಡು ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಹಾರ್ದಿಕ್ ಸಿಂಗ್ (34), ಜುಗ್ರಾಜ್ ಸಿಂಗ್ (35) ತಲಾ ಗೋಲು ಸಿಡಿಸಿ ಮುನ್ನಡೆ ಹಿಗ್ಗಿಸಿದರೆ, ಅಭಿಷೇಕ್ (41), ರಾಜ್‌ಕುಮಾರ್ ಪಾಲ್ (44), ದಿಲ್‌ಪ್ರೀತ್ ಸಿಂಗ್ (54) ಭಾರತ ಪರ ಪಂದ್ಯದ ಗೋಲುಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.