ಎಫ್​ಐಎಚ್​ ಹಾಕಿ ವಿಶ್ವಕಪ್: ಭಾರತ ಮಹಿಳೆಯರಿಗೆ ಚೀನಾ ಮೊದಲ ಎದುರಾಳಿ

ಎಫ್​ಐಎಚ್​ ಹಾಕಿ ವಿಶ್ವಕಪ್: ಭಾರತ ಮಹಿಳೆಯರಿಗೆ ಚೀನಾ ಮೊದಲ ಎದುರಾಳಿ
ಎಫ್​ಐಎಚ್​ ಹಾಕಿ ವಿಶ್ವಕಪ್: ಭಾರತ ಮಹಿಳೆಯರಿಗೆ ಚೀನಾ ಮೊದಲ ಎದುರಾಳಿ
Published on

ಆಮ್‌ಸ್ಟೆಲ್ವೀನ್ (ನೆದರ್ಲ್ಯಾಂಡ್ಸ್): ಪುರುಷರ ಬಳಿಕ ಭಾರತದ ಮಹಿಳೆಯರೂ ಎ್ಐಎಚ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಕಾಣಲು ಸಜ್ಜಾಗಿದ್ದು, ಭಾನುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ರಜತ ವಿಜೇತ ಚೀನಾ ತಂಡದ ಸವಾಲು ಎದುರಿಸಲಿದ್ದಾರೆ. ಕೋಚ್ ಜೋಯೆರ್ಡ್ ಮಾರಿನೆ ಮಾರ್ಗದರ್ಶನದ ಭಾರತ ತಂಡ ಡಿ ಗುಂಪಿನ ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ.


ವಿಶ್ವ ರ‌್ಯಾಂಕಿಂಗ್‌ನಲ್ಲಿ ಸದ್ಯ ಭಾರತ 9ನೇ ಸ್ಥಾನದಲ್ಲಿದ್ದರೆ, ಚೀನಾ ಮಹಿಳೆಯರು 2ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಭಾರತಕ್ಕೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದ್ದು, ಇದರಲ್ಲಿ ಗೆದ್ದರೆ ಭಾರತ 2ನೇ ಹಂತಕ್ಕೇರುವ ಆಸೆಗೆ ಬಲ ಬರಲಿದೆ. ವಿಶ್ವ ನಂ. 7 ಇಂಗ್ಲೆಂಡ್ ಮತ್ತು ವಿಶ್ವ ನಂ. 18 ದಕ್ಷಿಣ ಆಫ್ರಿಕಾ ಗುಂಪಿನ ಇನ್ನೆರಡು ತಂಡಗಳಾಗಿದ್ದು, ಭಾರತ ಬಲಿಷ್ಠ ಆರಂಭ ಕಾಣುವ ಅಗತ್ಯವಿದೆ.
ಭಾರತ ತಂಡದ ಐವರು ಆಟಗಾರ್ತಿಯರಾದ ಸವಿತಾ ಪೂನಿಯಾ (313), ನೇಹಾ ಗೋಯಲ್(202), ನವನೀತ್ ಕೌರ್ (211), ನಿಕ್ಕಿ ಪ್ರಧಾನ್(207) ಮತ್ತು ಸುಶೀಲಾ ಚಾನು (262) 200ಕ್ಕೂ ಅಧಿಕ ಅಂತಾರಾಷ್ಟ್ರೀಯ ಹಾಕಿ ಪಂದ್ಯ ಆಡಿರುವ ಅನುಭವ ಹೊಂದಿದ್ದಾರೆ. ಆದರೆ ಭಾರತ ತಂಡದ 11 ಆಟಗಾರ್ತಿಯರಿಗೆ ಇದು ಚೊಚ್ಚಲ ವಿಶ್ವಕಪ್ ಆಗಿದೆ. 3ನೇ ಬಾರಿ ವಿಶ್ವಕಪ್ ಆಡುತ್ತಿರುವ ಗೋಲು ಕೀಪರ್ ಸವಿತಾ ತಂಡದಲ್ಲಿರುವ ಅತ್ಯಂತ ಅನುಭವಿ ಎನಿಸಿದ್ದಾರೆ.
ಭಾರತ 1974ರ ಚೊಚ್ಚಲ ಆವೃತ್ತಿಯಲ್ಲಿ 4ನೇ ಸ್ಥಾನ ಪಡೆದಿದ್ದೇ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಆದರೆ ಈ ಬಾರಿ ಪೋಡಿಯಂ ಏರಿ ಇತಿಹಾಸ ಬದಲಾಯಿಸುವುದು ಭಾರತ ತಂಡದ ಗುರಿಯಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್‌ನಲ್ಲಿ ನೇಷನ್ಸ್ ಕಪ್ ಗೆದ್ದು ಪ್ರೊ ಲೀಗ್‌ಗೆ ಮರಳಿರುವ ಭಾರತದ ಮಹಿಳೆಯರಿಗೆ ಡ್ರಾೃಗ್ ಫ್ಲಿಕರ್ ದೀಪಿಕಾ ಸೆಹ್ರಾವತ್ ಲಯಕ್ಕೆ ಮರಳಿರುವುದು ಹೆಚ್ಚು ಬಲ ತಂದಿದೆ. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳೆಯರಿಗೆ 4ನೇ ಸ್ಥಾನದೊಂದಿಗೆ ಇತಿಹಾಸ ನಿರ್ಮಿಸಲು ನೆರವಾಗಿದ್ದ ಮರಿನೆ ಮತ್ತೆ ಕೋಚ್ ಆಗಿರುವುದು ಕೂಡ ಭಾರತಕ್ಕೆ ವಿಶ್ವಾಸ ಹೆಚ್ಚಿಸಿದೆ.
ಆದರೂ ಚೀನಾ ತಂಡ ಕಾಗದದ ಮೇಲೆ ಈ ಪಂದ್ಯದ ೇವರಿಟ್ ಎನಿಸಿದೆ. 2025ರ ಏಷ್ಯಾಕಪ್‌ನಲ್ಲಿ ಚೀನಾ ತಂಡ ಭಾರತಕ್ಕೆ 1-4ರಿಂದ ಸೋಲುಣಿಸಿತ್ತು. ಆದರೆ ಈ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲೂ ಚೀನಾ ಎದುರು ಪ್ರಾಬಲ್ಯ ಸಾಧಿಸಲು ನೆರವಾಗಲಿದೆ.
ಆರಂಭ: ಸಂಜೆ 4.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net