ಮಹಿಳಾ ಹಾಕಿ ವಿಶ್ವಕಪ್​ ಕ್ವಾಲಿಫೈಯರ್​: ಭಾರತ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿ

ಮಹಿಳಾ ಹಾಕಿ ವಿಶ್ವಕಪ್​ ಕ್ವಾಲಿಫೈಯರ್​: ಭಾರತ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿ
ಮಹಿಳಾ ಹಾಕಿ ವಿಶ್ವಕಪ್​ ಕ್ವಾಲಿಫೈಯರ್​: ಭಾರತ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿ
Published on
ಹೈದರಾಬಾದ್​: ಆತಿಥೇಯ ಭಾರತ ತಂಡ ಎಫ್​​ಐಎಚ್​ ಮಹಿಳಾ ಹಾಕಿ ವಿಶ್ವಕಪ್​ ಕ್ವಾಲಿಫೈಯರ್ಸ್ (FIH Women''s Hockey WC Qualifiers)​ ಟೂರ್ನಿಯಲ್ಲಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಭಾರತ ತಂಡ 0-2 ಗೋಲುಗಳ ಅಂತರದಿಂದ ಇಂಗ್ಲೆಂಡ್​ ವಿರುದ್ಧ ಪರಾಭವಗೊಂಡಿತು.

ಟೂರ್ನಿಯಲ್ಲಿ ಸತತ 5 ಗೆಲುವಿನೊಂದಿಗೆ ಅಜೇಯ ಓಟ ಕಾಯ್ದುಕೊಂಡ ಇಂಗ್ಲೆಂಡ್​ ಸ್ವರ್ಣ ಪದಕಕ್ಕೆ ಕೊರಳೊಡ್ಡಿತು. ಇದಕ್ಕೆ ಮುನ್ನ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಇಟಲಿ ಎದುರು 0-1 ಗೋಲುಗಳ ಅಂತರದಿಂದ ಗೆದ್ದ ಸ್ಕಾಟ್ಲೆಂಡ್​ ತಂಡ, ಟೂರ್ನಿಯ ಮೂರನೇ ತಂಡವಾಗಿ ಮುಂಬರುವ ಮಹಿಳಾ ಹಾಕಿ ವಿಶ್ವಕಪ್​ ಟೂರ್ನಿಗೆ ಅರ್ಹತೆ ಖಾತ್ರಿಪಡಿಸಿಕೊಂಡಿತು. ಭಾರತ ಮತ್ತು ಇಂಗ್ಲೆಂಡ್​ ಈಗಾಗಲೆ ಮೊದಲೆರಡು ತಂಡಗಳಾಗಿ ಅರ್ಹಗೆ ಗಿಟ್ಟಿಸಿಕೊಂಡಿದ್ದವು.
ಫೈನಲ್​ ಪಂದ್ಯದ ಆರಂಭದಲ್ಲಿ ಪೆನಾಲ್ಟಿ ಕಾರ್ನರ್​ ಕೈಚೆಲ್ಲಿದ ಭಾರತ ಮುನ್ನಡೆ ಸಾಧಿಸುವ ಅವಕಾಶ ಬಿಟ್ಟುಕೊಟ್ಟಿತು. ಉತ್ತಮ ಫಾರ್ಮ್​ನಲ್ಲಿರುವ ಗ್ರೇಸ್​ ಬಾಲ್ಡನ್​ 13ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್​ನಲ್ಲಿ ಗೋಲು ಸಿಡಿಸಿ ಇಂಗ್ಲೆಂಡ್​ಗೆ ಮೇಲುಗೈ ಒದಗಿಸಿದರು. ಈ ಪಂದ್ಯಕ್ಕೂ ಮುನ್ನವೇ ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದ್ದ ಭಾರತ ತಂಡ ಪೆನಾಲ್ಟಿ ಕಾರ್ನರ್​ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿತು. 43ನೇ ನಿಮಿಷದಲ್ಲಿ ಇಂಗ್ಲೆಂಡ್​ನ ಮುನ್ನಡೆ ದ್ವಿಗುಣಗೊಳಿಸಿದ ಎಲಿಜಬೆತ್​ ನೀಲ್​ ಭಾರತದ ಸೋಲಿನ ಅಂತರ ಹಿಗ್ಗಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net