ಏಷ್ಯಾಡ್​ಗೆ ಭಾರತದ 504 ಕ್ರೀಡಾಪಟುಗಳು?: ಕ್ರೀಡಾ ಸಚಿವಾಲಯದಿಂದ ಅನುಮೋದನೆ ಕೇಳಿದ ಐಒಎ

ಏಷ್ಯಾಡ್​ಗೆ ಭಾರತದ 504 ಕ್ರೀಡಾಪಟುಗಳು?: ಕ್ರೀಡಾ ಸಚಿವಾಲಯದಿಂದ ಅನುಮೋದನೆ ಕೇಳಿದ ಐಒಎ
ಏಷ್ಯಾಡ್​ಗೆ ಭಾರತದ 504 ಕ್ರೀಡಾಪಟುಗಳು?: ಕ್ರೀಡಾ ಸಚಿವಾಲಯದಿಂದ ಅನುಮೋದನೆ ಕೇಳಿದ ಐಒಎ
Published on

ನವದೆಹಲಿ: ಮುಂಬರುವ ಏಷ್ಯನ್​ ಗೇಮ್ಸ್​ನಲ್ಲಿ (

Asian Games

) ಭಾರತದ 275 ಪುರುಷರು ಮತ್ತು 229 ಮಹಿಳೆಯರ ಸಹಿತ 36 ಕ್ರೀಡೆಗಳಲ್ಲಿ ಒಟ್ಟು 504 ಕ್ರೀಡಾಪಟುಗಳ ಭಾಗವಹಿಸುವಿಕೆಗೆ ಕೇಂದ್ರ ಕ್ರೀಡಾ ಸಚಿವಾಲಯದ ಅನುಮೋದನೆಯನ್ನು ಭಾರತೀಯ ಒಲಿಂಪಿಕ್​ ಸಂಸ್ಥೆ (ಐಒಎ) ಕೇಳಿದೆ. ಇದು ಕಳೆದ ಆವೃತ್ತಿಗಿಂತ ಸಣ್ಣ ತಂಡವಾಗಿರಲಿದೆ. 2022ರ ಹಾಂಗ್​ರೆೌ ಏಷ್ಯಾಡ್​ನಲ್ಲಿ ಭಾರತದಿಂದ 333 ಪುರುಷರು, 328 ಮಹಿಳೆಯರ ಸಹಿತ 40 ಕ್ರೀಡೆಗಳಲ್ಲಿ ಒಟ್ಟು 661 ಕ್ರೀಡಾಪಟುಗಳು ಭಾಗವಹಿಸಿದ್ದರು. 

20ನೇ ಆವೃತ್ತಿಯ ಏಷ್ಯನ್​ ಗೇಮ್ಸ್​ ಸೆಪ್ಟೆಂಬರ್​ 19ರಿಂದ ಅಕ್ಟೋಬರ್​ 4ರವರೆಗೆ ಜಪಾನ್​ನ ಐಚಿ ಪ್ರಿೆಕ್ಚರ್​ ಮತ್ತು ನಗೋಯಾ ನಗರಗಳಲ್ಲಿ ನಡೆಯಲಿದೆ. 504 ಕ್ರೀಡಾಪಟುಗಳ ಜತೆಗೆ 167 ತರಬೇತಿ, ಸಹಾಯಕ ಸಿಬ್ಬಂದಿ ಮತ್ತು 69 ಅಧಿಕಾರಿಗಳ ಸಹಿತ ಒಟ್ಟು 740 ಸದಸ್ಯರ ತಂಡವನ್ನು ಏಷ್ಯಾಡ್​ಗೆ ಕಳುಹಿಸಲು ಐಒಎ ಅನುಮತಿ ಕೇಳಿದೆ.

ಅಥ್ಲೆಟಿಕ್ಸ್​ನಲ್ಲಿ ಸರ್ವಾಧಿಕ 72 ಕ್ರೀಡಾಪಟುಗಳು ಭಾಗವಹಿಸಲಿದ್ದರೆ, ಕ್ರಿಕೆಟ್​ ಮತ್ತು ಶೂಟಿಂಗ್​ ತಂಡಗಳು ಗರಿಷ್ಠ ಸಂಖ್ಯೆಯ ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿದೆ. ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್​ ತಂಡಗಳೊಂದಿಗೆ ಬಿಸಿಸಿಐ ತಲಾ 10ರಂತೆ ಒಟ್ಟು 20 ಸಹಾಯಕ ಸಿಬ್ಬಂದಿಯನ್ನು ಕಳುಹಿಸಲಿದೆ. ಕಳೆದ ಏಷ್ಯಾಡ್​ನಲ್ಲಿ ಅತ್ಯಧಿಕ ಪದಕ ಗೆದ್ದಿದ್ದ ಶೂಟಿಂಗ್​ ತಂಡ ಈ ಬಾರಿ 30 ಶೂಟರ್​ಗಳನ್ನು ಒಳಗೊಂಡಿದ್ದು, ಜತೆಗೆ 15 ಸಹಾಯಕ ಸಿಬ್ಬಂದಿ ತೆರಳಲಿದ್ದಾರೆ. ಅಥ್ಲೆಟಿಕ್ಸ್​ ತಂಡ 28 ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿದೆ.

2022ರ ಏಷ್ಯಾಡ್​ನಲ್ಲಿ ಭಾರತ 28 ಚಿನ್ನ, 38 ಬೆಳ್ಳಿ, 40 ಕಂಚಿನ ಸಹಿತ ಒಟ್ಟು 106 ಪದಕಗಳನ್ನು ಗೆದ್ದು ಹೊಸ ಇತಿಹಾಸ ಬರೆದಿತ್ತು. ಈ ಬಾರಿ ಆ ದಾಖಲೆಯನ್ನು ಮುರಿಯುವ ಹಂಬಲ ಭಾರತ ತಂಡದ್ದಾಗಿದೆ. 

22.6 ಕೋಟಿ ರೂ. ವೆಚ್ಚ
ಏಷ್ಯಾಡ್​ಗೆ ಭಾರತ ತಂಡವನ್ನು ಕಳುಹಿಸಲು ಸರ್ಕಾರಕ್ಕೆ ಒಟ್ಟು 22.6 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಉದ್ಘಾಟನಾ&ಸಮಾರೋಪ ಸಮಾರಂಭಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಮವಸ್ತ್ರ, ಕ್ರೀಡಾ ಸ್ಪರ್ಧೆಯ ಕಿಟ್​, ನಿತ್ಯಭತ್ಯೆ, ವಿಮಾನದ ಟಿಕೆಟ್​, ವಿಮೆ ವೆಚ್ಚದ ಮೊತ್ತ ಸೇರಿದೆ. 

ಅಥ್ಲೆಟಿಕ್ಸ್​ ತಂಡದಲ್ಲಿ 

ರಾಜ್ಯದ 6 ಅಥ್ಲೀಟ್ಸ್​

ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸಲು ಭಾರತೀಯ ಅಥ್ಲೆಟಿಕ್ಸ್​ ಸಂಸ್ಥೆ ಒಟ್ಟು 72 ಅಥ್ಲೀಟ್​ಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ರಾಜ್ಯದ 6 ಅಥ್ಲೀಟ್​ಗಳು ಸ್ಥಾನ ಪಡೆದಿದ್ದಾರೆ. ಅವರೆಂದರೆ ಯಶಸ್​ ಪಿ. (400 ಮೀ. ಹರ್ಡಲ್ಸ್​), ಸಿಂಧುಶ್ರೀ (ಪೋಲ್​ವಾಲ್ಟ್​), ಸುಪ್ರಿಯಾ (ಹೈಜಂಪ್​), ಸ್ನೇಹಾ ಎಸ್​.ಎಸ್​. (4/100 ಮೀ. ರಿಲೇ, 4/100 ಮೀ. ಮಿಶ್ರ ರಿಲೇ), ಪೂವಮ್ಮ (4/400 ಮೀ. ರಿಲೇ), ಉನ್ನತಿ ಬೊಲ್ಲಾಂಡ (200 ಮೀ, 4/100 ಮೀ. ಮಿಶ್ರ ರಿಲೇ). ಈ ಪಟ್ಟಿಯನ್ನು ಭಾರತೀಯ ಅಥ್ಲೆಟಿಕ್ಸ್​ ಸಂಸ್ಥೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಯಾಕೆಂದರೆ ಕೂಟಕ್ಕೆ ಕೆಲ ಸಮಯ ಬಾಕಿ ಇದ್ದು, ಇನ್ನೂ ಕೆಲ ಅಥ್ಲೀಟ್​ಗಳು ಕೂಟಕ್ಕೆ ಅರ್ಹತೆ ಸಂಪಾದಿಸುವ ನಿರೀೆ ಇದೆ. ಈಗ ಪಟ್ಟಿ ಮಾಡಿರುವ ತಂಡದಲ್ಲಿ ನೀರಜ್​ ಚೋಪ್ರಾ, ತಜಿಂದರ್​ಪಾಲ್​ ಸಿಂಗ್​ ಟೂರ್​, ಅನ್ನುರಾಣಿ, ಅವಿನಾಶ್​ ಸಾಬ್ಲೆ, ಜ್ಯೋತಿ ಯರಾಜಿ, ಪಾರುಲ್​ ಚೌಧರಿ ಅವರಂಥ ಪ್ರಮುಖ ಅಥ್ಲೀಟ್​ಗಳು ಸೇರಿದ್ದಾರೆ. ಈ ಬಾರಿ ಅಥ್ಲೆಟಿಕ್ಸ್​ನಲ್ಲಿ ಭಾರತದಿಂದ ಸರ್ವಾಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 2010ರ ಆವೃತ್ತಿಯಲ್ಲಿ 69 ಅಥ್ಲೀಟ್​ಗಳು ಸ್ಪರ್ಧಿಸಿದ್ದು ಹಿಂದಿನ ಗರಿಷ್ಠ. ಕಳೆದ ಆವೃತ್ತಿಯಲ್ಲಿ 68 ಅಥ್ಲೀಟ್​ಗಳು ಸ್ಪರ್ಧಿಸಿದ್ದರು ಮತ್ತು 6 ಚಿನ್ನ, 14 ಬೆಳ್ಳಿ, 9 ಕಂಚಿನ ಸಹಿತ 29 ಪದಕ ಗೆದ್ದಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net