ಬಿಟಿಎಂನ ಶೈಕ್ ಅಫ್ನಾನ್‌ಗೆ ರಾಷ್ಟ್ರೀಯ ಐಸ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ
ಬಿಟಿಎಂನ ಶೈಕ್ ಅಫ್ನಾನ್‌ಗೆ ರಾಷ್ಟ್ರೀಯ ಐಸ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಇಕ್ರಾ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿ
ಬೆಂಗಳೂರು/ಡೆಹ್ರಾಡೂನ್: ಬೆಂಗಳೂರು ನಗರದ ಬಿಟಿಎಂ ಲೇಔಟ್ ನಿವಾಸಿಯಾದ ಶೈಕ್ ಅಫ್ನಾನ್ ಐಸ್ ಹಾಕಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ (National Ice Hockey Championship) ಕರ್ನಾಟಕವನ್ನು ಪ್ರತಿನಿಧಿಸಿ 12 ವಯೋಮಿತಿ ಬಾಲಕರ ವಿಭಾಗದಲ್ಲಿ ರಾಷ್ಟ್ರೀಯ ಬೆಳ್ಳಿ ಪದಕ ಗೆದ್ದುಕೊಂಡಿದ್ದಾನೆ.
ಈ ಚಾಂಪಿಯನ್‌ಷಿಪ್ ಜೂನ್ 14ರಂದು ಡೆಹ್ರಾಡೂನ್‌ನಲ್ಲಿ ಮುಕ್ತಾಯಗೊಂಡಿದ್ದು, ಕರ್ನಾಟಕ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ವಿಭಾಗದಲ್ಲಿ ಚಂಡೀಗಢ ಚಿನ್ನದ ಪದಕ ಗೆದ್ದರೆ, ರಾಜಸ್ಥಾನ ಕಂಚಿನ ಪದಕ ಪಡೆದುಕೊಂಡಿತು.
ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಸಿದ್ಧತೆಯ ಭಾಗವಾಗಿ ಕರ್ನಾಟಕ ತಂಡ ಕಳೆದ ಏಪ್ರಿಲ್ ತಿಂಗಳಲ್ಲಿ ಡೆಹ್ರಾಡೂನ್‌ನಲ್ಲಿ 10 ದಿನಗಳ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಿತ್ತು. ಈ ಶಿಬಿರದಲ್ಲಿ ಪಡೆದ ತರಬೇತಿ ಮತ್ತು ತಂಡದ ಸಮರ್ಪಣೆಯ ಫಲವಾಗಿ ಕರ್ನಾಟಕ ತಂಡ ರಾಷ್ಟ್ರ ಮಟ್ಟದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಯಿತು.
ಶೈಕ್ ಅಫ್ನಾನ್ ಪ್ರಸ್ತುತ ಬಿಟಿಎಂ 1ನೇ ಹಂತದ ಇಕ್ರಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಕ್ರೀಡಾ ಕ್ಷೇತ್ರದಲ್ಲಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾನೆ.
ತಂಡಕ್ಕೆ ಮುಖ್ಯ ಕೋಚ್ ಅರುಣ್ ಅವರ ಮಾರ್ಗದರ್ಶನ ದೊರೆತಿದ್ದು, ಸಹಾಯಕ ಕೋಚ್‌ಗಳಾದ ಶೈಕ್ ಅಬ್ದುಲ್ಲಾ, ಆರ್ಯನ್ ವಿಜಯತ್ ಹಾಗೂ ಅಶ್ವಿನ್ ಅವರ ತರಬೇತಿ ಮತ್ತು ಪ್ರೋತ್ಸಾಹವು ಆಟಗಾರರ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
ಅಫ್ನಾನ್ ಅವರು ಫಾಲ್ಕನ್ ಸ್ಕೇಟಿಂಗ್ ಅಕಾಡೆಮಿಯ ಸ್ಥಾಪಕರೂ ಹಾಗೂ ಖ್ಯಾತ ಸ್ಕೇಟಿಂಗ್ ಕೋಚ್ ಆಗಿರುವ ಶೈಕ್ ಅಬ್ದುಲ್ಲಾ ಅವರ ಪುತ್ರರಾಗಿದ್ದಾನೆ. ಬಿಟಿಎಂ 4ನೇ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾಲ್ಕನ್ ಸ್ಕೇಟಿಂಗ್ ಅಕಾಡೆಮಿ ಮೂಲಕ ಶೈಕ್ ಅಬ್ದುಲ್ಲಾ ಅನೇಕ ಯುವ ಕ್ರೀಡಾಪಟುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಿದ್ದು, ಅವರ ಶಿಷ್ಯರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕಗಳನ್ನು ಗೆದ್ದು ಹೆಸರು ಮಾಡಿದ್ದಾರೆ.
ಶೈಕ್ ಅಫ್ನಾನ್ ಸಾಧನೆ ರಾಜ್ಯದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ಕರ್ನಾಟಕದಲ್ಲಿ ಐಸ್ ಹಾಕಿ ಮತ್ತು ಸ್ಕೇಟಿಂಗ್ ಕ್ರೀಡೆಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲಿದೆ.