ಭಾರತಕ್ಕೆ ಕಿರಿಯರ ಏಷ್ಯಾಕಪ್​ ಹಾಕಿ ಕಿರೀಟ

ಭಾರತಕ್ಕೆ ಕಿರಿಯರ ಏಷ್ಯಾಕಪ್​ ಹಾಕಿ ಕಿರೀಟ
ಭಾರತಕ್ಕೆ ಕಿರಿಯರ ಏಷ್ಯಾಕಪ್​ ಹಾಕಿ ಕಿರೀಟ
Published on
ಕಾಕಮಿಗಹರ (ಜಪಾನ್​): ಭಾರತದ ಪುರುಷರ ತಂಡ 18 ವಯೋಮಿತಿ ಏಷ್ಯಾಕಪ್​ ಹಾಕಿ (men''s Under-18 Asia Cup) ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟವೇರಿದೆ. ಭಾರತ ತಂಡ ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಆತಿಥೇಯ ಜಪಾನ್​ ಎದುರು 4-1 ಗೋಲುಗಳಿಂದ ಗೆಲುವು ದಾಖಲಿಸಿತು.

ಭಾರತ ಪರ ಆಶಿಶ್​ ತನಿ ಪೂರ್ತಿ (2, 28, 34) ಹ್ಯಾಟ್ರಿಕ್​ ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು. ನಾಯಕ ಕೇತನ್​ ಕುಶ್ವಾಹ (30) ಭಾರತದ ಮತ್ತೊಂದು ಗೋಲು ಬಾರಿಸಿದರು. ಆಶಿಶ್​ ಟೂರ್ನಿಯಲ್ಲಿ ಸರ್ವಾಧಿಕ 13 ಗೋಲು ಸಿಡಿಸಿದ ಸಾಧನೆ ಮಾಡಿದರು. ಕಿರಿಯರ ಏಷ್ಯಾಕಪ್​ನಲ್ಲಿ ಭಾರತ 3ನೇ ಬಾರಿ ಪ್ರಶಸ್ತಿ ಜಯಿಸಿದೆ. ಈ ಮುನ್ನ 2001 ಮತ್ತು 2016ರಲ್ಲಿ ಪ್ರಶಸ್ತಿ ಗೆದ್ದಿತ್ತು.

ಮಹಿಳೆಯರಿಗೆ ಕಂಚು:
ಮಹಿಳೆಯರ ವಿಭಾಗದಲ್ಲಿ ಭಾರತ ತಂಡ ಕಂಚಿನ ಪದಕದ ಹೋರಾಟದಲ್ಲಿ ದಣ ಕೊರಿಯಾ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿತು.
ಹಾಕಿ ಇಂಡಿಯಾ ಬಹುಮಾನ
ಕಿರಿಯರ ಏಷ್ಯಾಕಪ್​ ವಿಜೇತ ಭಾರತದ ಪುರುಷರ ತಂಡದ ಆಟಗಾರರಿಗೆ ತಲಾ 3 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1.5 ಲಕ್ಷ ರೂ. ಬಹುಮಾನವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ಕಂಚು ವಿಜೇತ ಮಹಿಳಾ ತಂಡದ ಆಟಗಾರ್ತಿಯರಿಗೆ ತಲಾ 1 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 50 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net