ಡಚ್ಚರಿಗೆ ಶಾಕ್​; ಅರ್ಜೆಂಟೀನಾಗೆ ಮಹಿಳಾ ಹಾಕಿ ವಿಶ್ವಕಪ್​ ಕಿರೀಟ

ಡಚ್ಚರಿಗೆ ಶಾಕ್​; ಅರ್ಜೆಂಟೀನಾಗೆ ಮಹಿಳಾ ಹಾಕಿ ವಿಶ್ವಕಪ್​ ಕಿರೀಟ
ಡಚ್ಚರಿಗೆ ಶಾಕ್​; ಅರ್ಜೆಂಟೀನಾಗೆ ಮಹಿಳಾ ಹಾಕಿ ವಿಶ್ವಕಪ್​ ಕಿರೀಟ
Published on

ಆಮ್​ಸ್ಟೆಲ್ವೀನ್​: ಸತತ 4ನೇ ಮತ್ತು ಒಟ್ಟಾರೆ 10ನೇ ಬಾರಿ ಮಹಿಳೆಯರ ಹಾಕಿ ವಿಶ್ವಕಪ್​ (

women''s FIH World Cup

) ಜಯಿಸುವ ಸಹ-ಆತಿಥೇಯ ನೆದರ್ಲ್ಯಾಂಡ್ಸ್​ ತಂಡದ ಕನಸನ್ನು ಅರ್ಜೆಂಟೀನಾ ಭಗ್ನಗೊಳಿಸಿದೆ. ಶನಿವಾರ ನಡೆದ ಫೈನಲ್​ ಪಂದ್ಯದ ಪೆನಾಲ್ಟಿ ಶೂಟೌಟ್​ನಲ್ಲಿ ಡಚ್ಚರ ತಂಡವನ್ನು 3-1 ಅಂತರದಿಂದ ಮಣಿಸುವ ಮೂಲಕ ಅರ್ಜೆಂಟೀನಾ 3ನೇ ಬಾರಿ ವಿಶ್ವ ಚಾಂಪಿಯನ್​ ಪಟ್ಟವೇರಿದೆ. ಅರ್ಜೆಂಟೀನಾ ಈ ಮುನ್ನ 2002 ಮತ್ತು 2010ರಲ್ಲೂ ಮಹಿಳಾ ಹಾಕಿ ವಿಶ್ವಕಪ್​ ಕಿರೀಟ ಗೆದ್ದಿತ್ತು.

ತವರು ಪ್ರೇಕ್ಷಕರ ಬೆಂಬಲದ ಬಲ ಹೊಂದಿದ್ದ ನೆದರ್ಲ್ಯಾಂಡ್ಸ್​ ಪಂದ್ಯದ 30ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ 54ನೇ ನಿಮಿಷದಲ್ಲಿ ಪಂದ್ಯವನ್ನು ಸಮಬಲಕ್ಕೆ ತಂದ ಅರ್ಜೆಂಟೀನಾ, ಪೆನಾಲ್ಟಿ ಶೂಟೌಟ್​ಗೆ ವಿಸ್ತರಿಸುವಲ್ಲಿ ಯಶಸ್ವಿಯಾಯಿತು. ಆಸ್ಟ್ರೆಲಿಯಾ ವಿರುದ್ಧ 1-0ಯಿಂದ ಗೆದ್ದ ಸಹ-ಆತಿಥೇಯ ಬೆಲ್ಜಿಯಂ ತಂಡ ಕಂಚಿನ ಪದಕ ಒಲಿಸಿಕೊಂಡಿತು.
ಇಂದು ಪುರುಷರ ಫೈನಲ್​ ಪಂದ್ಯ
ಹಾಲಿ ಚಾಂಪಿಯನ್​ ಜರ್ಮನಿ ಮತ್ತು ಸ್ಪೇನ್​ ತಂಡಗಳು ಪುರುಷರ ಹಾಕಿ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಜರ್ಮನಿ ತಂಡ ಸತತ 2ನೇ ಬಾರಿ ವಿಶ್ವಕಪ್​ ಜಯಿಸುವ ಮೂಲಕ ಗರಿಷ್ಠ 4 ಬಾರಿ ವಿಶ್ವ ಚಾಂಪಿಯನ್​ ಪಟ್ಟವೇರಿದ ಪಾಕಿಸ್ತಾನದ ದಾಖಲೆ ಸರಿಗಟ್ಟುವ ತವಕದಲ್ಲಿದೆ. ಜರ್ಮನಿ 6 ಬಾರಿ ಫೈನಲ್​ಗೇರಿದ ಪಾಕ್​ ಸಾಧನೆಯನ್ನು ಈಗಾಗಲೆ ಸರಿಗಟ್ಟಿದೆ. ಸ್ಪೇನ್​ ತಂಡ 28 ವರ್ಷಗಳ ಬಳಿಕ ಫೈನಲ್​ಗೇರಿದ್ದು, 1971 ಮತ್ತು 1998ರಲ್ಲಿ ಹಿಂದಿನ 2 ಬಾರಿ ಕೈತಪ್ಪಿದ್ದ ಪ್ರಶಸ್ತಿಯನ್ನು ಈ ಬಾರಿ ಒಲಿಸಿಕೊಳ್ಳುವ ಹಂಬಲದಲ್ಲಿದೆ. ಈ ಮೂಲಕ ಹಾಕಿ ವಿಶ್ವಕಪ್​ ಗೆದ್ದ 7ನೇ ತಂಡ ಎನಿಸುವ ಅವಕಾಶ ಸ್ಪೇನ್​ ಮುಂದಿದೆ.
ಆರಂಭ: ರಾತ್ರಿ 8.00
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net