ಏರ್​ಫೋರ್ಸ್​ ಮಾರ್ಷಲ್​ ಅರ್ಜನ್​ ಸಿಂಗ್​ ಸ್ಮಾರಕ ಹಾಕಿ; ಕಣದಲ್ಲಿವೆ 16 ತಂಡಗಳು

ಏರ್​ಫೋರ್ಸ್​ ಮಾರ್ಷಲ್​ ಅರ್ಜನ್​ ಸಿಂಗ್​ ಸ್ಮಾರಕ ಹಾಕಿ; ಕಣದಲ್ಲಿವೆ 16 ತಂಡಗಳು
ಏರ್​ಫೋರ್ಸ್​ ಮಾರ್ಷಲ್​ ಅರ್ಜನ್​ ಸಿಂಗ್​ ಸ್ಮಾರಕ ಹಾಕಿ; ಕಣದಲ್ಲಿವೆ 16 ತಂಡಗಳು
Published on
ಬೆಂಗಳೂರು: ಏಳನೇ ಆವೃತ್ತಿಯ ಏರ್​ಫೋರ್ಸ್​ ಮಾರ್ಷಲ್​ ಅರ್ಜನ್​ ಸಿಂಗ್​ ಸ್ಮಾರಕ ಹಾಕಿ ಟೂರ್ನಿ (THE MARSHAL OF THE AIR FORCE ARJAN SINGH MEMORIAL HOCKEY TOURNAMENT) ಮಂಗಳವಾರದಿಂದ ಜಾಲಹಳ್ಳಿಯ ಏರ್ ಫೋರ್ಸ್​ ಸ್ಟೇಷನ್​ನ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಏರ್ ಫೋರ್ಸ್​ ಸ್ಪೋರ್ಟ್ಸ್​ ಕಂಟ್ರೋಲ್​ ಬೋರ್ಡ್​ (ಎಎಫ್​ಎಸ್​ಸಿಬಿ) 2018ರಿಂದ ಈ ಟೂರ್ನಿಯನ್ನು ಆಯೋಜಿಸುತ್ತ ಬಂದಿದೆ. ಭಾರತೀಯ ವಾಯುಸೇನೆಯ ಮಾರ್ಷಲ್​ ಅರ್ಜನ್​ ಸಿಂಗ್​ ಹಾಕಿ ಆಟದ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅವರು ಯುದ್ಧದ ವೇಳೆ ಮಾತ್ರವಲ್ಲದೆ, ಕ್ರೀಡಾಕ್ಷೇತ್ರದಲ್ಲೂ ವಾಯುಸೇನಾ ಸೈನಿಕರಿಗೆ ಸ್ಫೂರ್ತಿಯಾಗಿದ್ದರು. ಹೀಗಾಗಿ ಅವರ ಸ್ಮರಣಾರ್ಥ ಈ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ ಎಂದು ಏರ್​ ಮಾರ್ಷಲ್​ ಎಸ್​. ಶಿವಕುಮಾರ್​ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು, ಲೀಗ್​ ಮತ್ತು ನಾಕೌಟ್​ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಟೂರ್ನಿಯ ವಿಜೇತ ತಂಡ 10 ಲಕ್ಷ ರೂ. ಬಹುಮಾನ ಪಡೆಯಲಿದೆ. ರನ್ನರ್​ಅಪ್​ ತಂಡ 8 ಲಕ್ಷ ರೂ. ಗಳಿಸಲಿದೆ. ಪ್ರತಿ ಪಂದ್ಯದ ಪಂದ್ಯಶ್ರೇಷ್ಠ ಆಟಗಾರ 25 ಸಾವಿರ ರೂ. ಮತ್ತು ಸರಣಿಶ್ರೇಷ್ಠ ಆಟಗಾರ 50 ಸಾವಿರ ರೂ. ಬಹುಮಾನ ಪಡೆಯಲಿದ್ದಾರೆ. ಜುಲೈ 3ರಂದು ಫೈನಲ್​ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net