ಒಡಿಶಾದಲ್ಲಿ ಹಾಕಿ ವರ್ಲ್ಡ್​ ಕಪ್ ಪಂದ್ಯಾವಳಿ ಆರಂಭ​: ಇಂದು ಭಾರತದ ಮೊದಲ ಪಂದ್ಯ

bub
Published on

ಭುವನೇಶ್ವರ: ಇಂದು(ನ.24) ಒಡಿಶಾದ ಭುವನೇಶ್ವರದಲ್ಲಿ ಆಯೋಜಿಸಲ್ಪಟ್ಟಿರುವ ಎಫ್​ಐಎಚ್​ ಜೂನಿಯರ್​ ಮೆನ್ಸ್​ ಹಾಕಿ ವರ್ಲ್ಡ್​ ಕಪ್​ ಪಂದ್ಯಾವಳಿಯ ಮೊದಲ ದಿನ. ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳ ಅತ್ಯಂತ ಪ್ರಸಿದ್ಧವಾದ 16 ಹಾಕಿ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ.

ಈ ವಿಶೇಷ ಈವೆಂಟ್​ಗೆ ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ನಡೆಸಿರುವುದಾಗಿ ಸಿಎಂ ನವೀನ್​ ಪಟ್ನಾಯಕ್​ ಮಂಗಳವಾರ ಟ್ವೀಟ್​ ಮಾಡಿ ತಿಳಿಸಿದ್ದರು. ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಈ ಸಂದರ್ಭಕ್ಕೆ ರಚಿಸಲಾಗಿರುವ ಮಣ್ಣಿನ ಕಲಾಕೃತಿಯ ಚಿತ್ರವನ್ನು ಹಾಕಿ ಇಂಡಿಯ ಸಂಸ್ಥೆ ಟ್ವಿಟರ್​ನಲ್ಲಿ ಶೇರ್​ ಮಾಡಿದೆ.

ಇಂದು ಐದು ಪಂದ್ಯಗಳು ನಡೆಯುತ್ತಿದ್ದು, ರಾತ್ರಿ 8 ಗಂಟೆಗೆ ಭಾರತ ತಂಡವು ಗ್ರೂಪ್​ ಬಿ ಪಂದ್ಯದಲ್ಲಿ ಫ್ರಾನ್ಸ್​ ತಂಡದ ವಿರುದ್ಧ ಸೆಣೆಸಲಿದೆ. ಟೋಕಿಯೋ ಒಲಿಂಪಿಕ್ಸ್​ನ ಕಂಚಿನ ಪದಕ ವಿಜೇತ ತಂಡದ ಸದಸ್ಯರಾಗಿದ್ದ ಮಿಡ್​ಫೀಲ್ಡರ್​​ ವಿವೇಕ್ ಸಾಗರ್​​ ಪ್ರಸಾದ್​ ಭಾರತ ತಂಡದ ನಾಯಕರಾಗಿದ್ದಾರೆ. ಪಂದ್ಯಾವಳಿಯ ನೇರ ಪ್ರಸಾರವು ವಾಚ್​.ಹಾಕಿ ಆ್ಯಪ್​ನಲ್ಲಿ ಲಭ್ಯವಿದೆ ಎಂದು ಹಾಕಿ ಇಂಡಿಯ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net