Paris Olympic: ಸತತ 2ನೇ ಪದಕ ನಿರೀಕ್ಷೆಯಲ್ಲಿ ಹಾಕಿ ತಂಡ; ಇಂದು ನ್ಯೂಜಿಲೆಂಡ್​ ಮೊದಲ ಎದುರಾಳಿ

web hockey
Published on

ಪ್ಯಾರಿಸ್​: ಟೋಕಿಯೊದಲ್ಲಿ ಕಂಚು ಜಯಿಸುವ ಮೂಲಕ 41 ವರ್ಷಗಳ ಪದಕದ ಬರವನ್ನು ನೀಗಿಸಿದ್ದ ಭಾರತದ ಪುರುಷರ ಹಾಕಿ ತಂಡ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲೂ ಅದೇ ಲಯವನ್ನು ಮುಂದುವರಿಸಿ ಪದಕದ ಬಣ್ಣವನ್ನು ಬದಲಾಯಿಸಲು ಸಜ್ಜಾಗಿದೆ. ಆದರೆ ಈ ಬಾರಿ ಕಠಿಣ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡ ಶನಿವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡದ ಸವಾಲು ಎದುರಿಸಲಿದೆ. ಟೋಕಿಯೊದಲ್ಲಿ ಕಂಚು ಜಯಿಸಿದ ಹಿನ್ನೆಲೆಯಲ್ಲಿ ಈ ಬಾರಿ ಹರ್ಮಾನ್​ಪ್ರೀತ್​ ಸಿಂಗ್​ ಬಳಗದ ಮೇಲೆ ನಿರೀಕ್ಷೆಯೂ ಹೆಚ್ಚಿದೆ.

12 ತಂಡಗಳ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡ ಹಾಲಿ ಚಾಂಪಿಯನ್​ ಬೆಲ್ಜಿಯಂ, ಬಲಿಷ್ಠ ಆಸ್ಟ್ರೆಲಿಯಾ, ಅರ್ಜೆಂಟೀನಾ ಮತ್ತು ಐರ್ಲೆಂಡ್​ ತಂಡಗಳನ್ನೂ ಒಳಗೊಂಡ ಬಿ ಗುಂಪಿನಲ್ಲಿದೆ. ಇದು "ಗ್ರೂಪ್​ ಆ್​ ಡೆತ್​' ಎಂದೇ ಪರಿಗಣಿಸಲ್ಪಟ್ಟಿದೆ. ನೆದರ್ಲೆಂಡ್​, ಜರ್ಮನಿ, ಬ್ರಿಟನ್​, ಸ್ಪೇನ್​, ದಣ ಆಫ್ರಿಕಾ ಮತ್ತು ಆತಿಥೇಯ ್ರಾನ್ಸ್​ ಎ ಗುಂಪಿನಲ್ಲಿವೆ. ಪ್ರತಿ ಗುಂಪಿನ ಅಗ್ರ 4 ತಂಡಗಳು ಕ್ವಾರ್ಟರ್​ೈನಲ್​ಗೇರಲಿವೆ. ಹೀಗಾಗಿ ಭಾರತ ತಂಡ ನಾಕೌಟ್​ಗೇರಲು ಕನಿಷ್ಠ 2ರಿಂದ 3 ಪಂದ್ಯಗಳನ್ನು ಜಯಿಸುವುದು ಅಗತ್ಯವಾಗಿದೆ.

ಭಾರತಕ್ಕೆ ಕೊನೇ 2 ಪಂದ್ಯಗಳಲ್ಲಿ ಬಲಿಷ್ಠ ಬೆಲ್ಜಿಯಂ (ಆ.1), ಆಸ್ಟ್ರೆಲಿಯಾ (ಆ.2) ಸವಾಲು ಎದುರಾಗಲಿವೆ. ಹೀಗಾಗಿ ಮೊದಲ 3 ಪಂದ್ಯಗಳಲ್ಲೇ ಗರಿಷ್ಠ ಅಂಕ ಕಲೆಹಾಕುವ ಒತ್ತಡವೂ ಇದೆ. ಒಲಿಂಪಿಕ್ಸ್​ಗೆ ಮುನ್ನ ವಿಶ್ವ ರ್ಯಾಂಕಿಂಗ್​ನಲ್ಲಿ ಭಾರತ 3ರಿಂದ 7ನೇ ಸ್ಥಾನಕ್ಕೆ ಜಾರಿರುವುದು ಹಿನ್ನಡೆ ಎನಿಸಿದೆ.

*11: ಭಾರತ ತಂಡದ 16 ಆಟಗಾರರ ಪೈಕಿ 11 ಮಂದಿ ಟೋಕಿಯೊದಲ್ಲಿ ಕಂಚು ಗೆದ್ದ ತಂಡದ ಭಾಗವಾಗಿದ್ದರು. 5 ಆಟಗಾರರು ಒಲಿಂಪಿಕ್ಸ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಶ್ರೀಜೇಶ್​ಗೆ ಸಿಗುವುದೇ ಗೆಲುವಿನ ವಿದಾಯ?
ಭಾರತ ತಂಡದ ಅನುಭವಿ ಗೋಲು ಕೀಪರ್​ ಪಿಆರ್​ ಶ್ರೀಜೇಶ್​ ಈಗಾಗಲೆ ಇದೇ ತನ್ನ ಕೊನೇ ಸ್ಪರ್ಧೆ ಎಂದು ಘೋಷಿಸಿದ್ದಾರೆ. "ಭಾರತೀಯ ಹಾಕಿಯ ಗೋಡೆ' ಎಂದೇ ಹೆಸರಾಗಿರುವ ಶ್ರೀಜೇಶ್​ ಜತೆಗೆ ಮಾಜಿ ನಾಯಕ ಮನ್​ಪ್ರೀತ್​ ಸಿಂಗ್​ಗೂ ಇದು 4ನೇ ಒಲಿಂಪಿಕ್ಸ್​ ಆಗಿದೆ. ನಾಯಕ ಹರ್ಮಾನ್​ಪ್ರೀತ್​, ಅಮಿತ್​ ರೋಹಿದಾಸ್​, ಸುಮಿತ್​, ಜರ್ಮನ್​ಪ್ರೀತ್​ ಭಾರತದ ರಕ್ಷಣಾ ವಿಭಾಗದ ಪ್ರಮುಖ ಬಲ ಆಗಿದ್ದರೆ, ಮನ್​ಪ್ರೀತ್​ ಸಿಂಗ್​, ಉಪನಾಯಕ ಹಾರ್ದಿಕ್​ ಸಿಂಗ್​, ವಿವೇಕ್​ ಸಾಗರ್​ ಪ್ರಸಾದ್​ ಮಿಡ್​ಫೀಲ್ಡ್​ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಲಲಿತ್​ ಉಪಾಧ್ಯಾಯ, ಮಂದೀಪ್​ ಸಿಂಗ್​, ಗುರ್ಜಂತ್​ ಸಿಂಗ್​, ಅಭಿಷೇಕ್​ ಮತ್ತು ಸುಖ್​ಜೀತ್​ ಗೋಲು ಗಳಿಸುವ ನಿರ್ಣಾಯಕ ಕೆಲಸ ಮಾಡಬೇಕಾಗಿದೆ. ನಾಯಕ ಹರ್ಮಾನ್​ಪ್ರೀತ್​ ವಿಶ್ವದ ಪ್ರಮುಖ ಡ್ರಾ$ಗ್​ ಫ್ಲಿಕರ್​ಗಳಲ್ಲಿ ಒಬ್ಬರಾಗಿದ್ದು, ಪೆನಾಲ್ಟಿ ಕಾರ್ನರ್​ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಎನಿಸಲಿದ್ದಾರೆ.

ಭಾರತದ ಲೀಗ್​ ಪಂದ್ಯ
ದಿನಾಂಕ ಎದುರಾಳಿ ಆರಂಭ
ಜುಲೈ 27 ನ್ಯೂಜಿಲೆಂಡ್​ ರಾತ್ರಿ 9.00
ಜುಲೈ 29 ಅರ್ಜೆಂಟೀನಾ ಸಂಜೆ 4.45
ಜುಲೈ 30 ಐರ್ಲೆಂಡ್​ ಸಂಜೆ 4.45
ಆಗಸ್ಟ್​ 1 ಬೆಲ್ಜಿಯಂ ಮಧ್ಯಾಹ್ನ 1.30
ಆಗಸ್ಟ್​ 2 ಆಸ್ಟ್ರೆಲಿಯಾ ಸಂಜೆ 4.45
*ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋಸಿನಿಮಾ

*ಒಲಿಂಪಿಕ್ಸ್​ನಲ್ಲಿ ಯಾವುದೇ ಪಂದ್ಯ ಸುಲಭವಾಗಿರುತ್ತದೆ ಎಂದು ನಿರೀಸಬಾರದು. ಮೊದಲ ಪಂದ್ಯ ನಮಗೆ ಉತ್ತಮ ಲಯವನ್ನು ರೂಪಿಸಿಕೊಡುವ ವಿಶ್ವಾಸದಲ್ಲಿದ್ದೇವೆ. ನಾವು ಒಮ್ಮೆಗೆ ಒಂದೇ ಪಂದ್ಯದ ಮೇಲೆ ಗಮನವಿಡುತ್ತೇವೆ.
| ಕ್ರೇಗ್​ ಫುಲ್ಟನ್​, ಭಾರತ ತಂಡದ ಕೋಚ್​

*ಸುಧೀರ್ಘ ಸಮಯದ ಬಳಿಕ ನಾವು ಒಲಿಂಪಿಕ್ಸ್​ನಲ್ಲಿ ಹಾಲಿ ಪದಕ ವಿಜೇತರಾಗಿ ಕಣಕ್ಕಿಳಿಯುತ್ತಿದ್ದೇವೆ. ಹೀಗಾಗಿ ನಮ್ಮ ಮೇಲೆ ಹೆಚ್ಚಿನ ನಿರೀೆಗಳಿವೆ ಮತ್ತು ನಾವು ಅದನ್ನು ಈಡೇರಿಸಲು ಸಿದ್ಧರಾಗಿದ್ದೇವೆ. ಈ ಬಾರಿ ಪದಕದ ಬಣ್ಣ ಬದಲಾಯಿಸುವುದು ಮತ್ತು ಭಾರತಕ್ಕೆ ಹೆಮ್ಮೆ ತರುವುದು ನಮ್ಮ ಗುರಿ.
| ಹರ್ಮಾನ್​ಪ್ರೀತ್​ ಸಿಂಗ್​, ಭಾರತ ತಂಡದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net