ಮುಂದಿನ ಐಪಿಎಲ್ ಆವೃತ್ತಿಗೆ ನೂತನ ನಿರ್ದೇಶಕ ನೇಮಕ ಮಾಡಿದ ಆರ್‌ಸಿಬಿ ಫ್ರಾಂಚೈಸಿ

New-Project-45-1
Published on

ಬೆಂಗಳೂರು: ಇಂಗ್ಲೆಂಡ್ 2019ರ ಏಕದಿನ ವಿಶ್ವಕಪ್ ಹಾಗೂ 2022ರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ತಂಡದ ಕಾರ್ಯಕ್ಷಮತೆ ನಿರ್ದೇಶಕರಾಗಿ ಪ್ರಮುಖ ಪಾತ್ರವಹಿಸಿದ್ದ ಮೋ ಬೋಬಟ್ ಮುಂದಿನ ವರ್ಷದ ಐಪಿಎಲ್ 17ನೇ ಆವೃತ್ತಿಗೆ ಆರ್‌ಸಿಬಿ ತಂಡದ ನೂತನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. 40 ವರ್ಷದ ಬೋಬಟ್ 2011ರಿಂದಲೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಭಾಗವಾಗಿದ್ದು, 2019ರಲ್ಲಿ ತಂಡದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ನ್ಯೂಜಿಲೆಂಡ್‌ನ ಮೈಕ್ ಹೆಸ್ಸನ್‌ರಿಂದ ತೆರವಾಗಿದ್ದ ಸ್ಥಾನವನ್ನು ಬೋಬಟ್ ತುಂಬಲಿದ್ದಾರೆ.

ಇಂಗ್ಲೆಂಡ್ ತಂಡದಲ್ಲಿ ಆಂಡಿ ್ಲವರ್ ಜತೆಯಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಬೋಬಟ್ ಮತ್ತೆ ಆರ್‌ಸಿಬಿ ತಂಡದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಆಂಡಿ ್ಲವರ್ ಜತೆಯಾಗಿ ಮುಂಬರುವ ಸವಾಲುಗಳನ್ನು ಎದುರಿಸಲು ಸಿದ್ಧನಾಗಿದ್ದೇನೆ. ಡು ಪ್ಲೆಸಿಸ್ ಹಾಗೂ ಇತರ ಆಟಗಾರರ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಆರ್‌ಸಿಬಿ ತಂಡ ಸೇರಲು ಉತ್ಸುಕನಾಗಿದ್ದೇನೆ ಎಂದು ಬೋಬಟ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net