ಅಹಮದಾಬಾದ್‌ನಲ್ಲಿ ಇಂದು ಕೆಕೆಆರ್-ಸನ್‌ರೈಸರ್ಸ್‌ ಫೈಟ್: ಸೋತವರಿಗೆ ಮತ್ತೊಂದು ಅವಕಾಶ

New-Project-32
Published on

ಅಹಮದಾಬಾದ್: ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಮೊದಲ ತಂಡವಾಗಿ ಪ್ಲೇಆ್ ಪ್ರವೇಶಿಸಿರುವ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ಮಳೆ ಸಹಾಯದೊಂದಿಗೆ ಎರಡನೇ ಸ್ಥಾನ ಪಡೆದಿರುವ 2016ರ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-17ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ. ಟೂರ್ನಿಯ ಲೀಗ್ ಹಂತದ ಏಕೈಕ ಮುಖಾಮುಖಿಯಲ್ಲಿ ಗೆಲುವು ಸಾಧಿಸಿರುವ ಕೆಕೆಆರ್ 3ನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ಮತ್ತೊಂದೆಡೆ ಆಸೀಸ್‌ನ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್‌ ಲೀಗ್ ಪಂದ್ಯದ ಸೋಲಿಗೆ ಸೇಡು ತೀರಿಸಿ ಫೈನಲ್‌ಗೇರುವ ಹಂಬಲದಲ್ಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಆತಿಥೇಯ ತಂಡಗಳಿಲ್ಲದೆ ಈ ಬಾರಿಯ ಪ್ಲೇಆಫ್ ನಡೆಯಲಿದೆ.

ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಯ ರೇಸ್‌ನಲ್ಲಿರುವ ಮಾಜಿ ಕ್ರಿಕೆಟಿಗ, ಮೆಂಟರ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಮರಳಿ ತನ್ನ ಅಧಿಪತ್ಯ ಸ್ಥಾಪಿಸುವ ನಿಟ್ಟಿನಲ್ಲಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ಜತೆಗೆ ಅತ್ಯುತ್ತಮ ರನ್‌ರೇಟ್ ಕಾಯ್ದುಕೊಂಡಿದ್ದ ಕೆಕೆಆರ್, ಆಡಿರುವ 14 ಪಂದ್ಯಗಳಲ್ಲಿ 9 ಗೆಲುವು, 2 ಸೋಲು, 2 ರದ್ದು ಸೇರಿ 20 ಅಂಕ ಕಲೆಹಾಕಿ ಅಗ್ರಸ್ಥಾನಿಯಾಗಿ ಪ್ಲೇಆ್ಗೇರಿದೆ. ಶ್ರೇಯಸ್ ಅಯ್ಯರ್ ಬಳಗದ ಹಿಂದಿನ 2 ಪಂದ್ಯಗಳು ಮಳೆಯಿಂದ ರದ್ದುಗೊಂಡಿದ್ದರೂ, 2014ರ ಬಳಿಕ ಕಪ್ ಗೆಲ್ಲುವ ಛಲದಲ್ಲಿದೆ.

ಇನ್ನು ಕಳೆದ ವರ್ಷ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡದಿದ್ದ ಸನ್‌ರೈಸರ್ ತಂಡ ಕಳೆದ ಆವೃತ್ತಿಯ ವೈಲ್ಯದಿಂದ ಹೊರಬಂದು ಈ ಬಾರಿ ಟೂರ್ನಿಯಲ್ಲಿ ತಂಡವೊಂದರ ಗರಿಷ್ಠ ರನ್ ದಾಖಲಿಸಿದೆ. ಟೂರ್ನಿಯುದ್ದಕ್ಕೂ ರನ್‌ಹೊಳೆ ಹರಿಸಿರುವ ಸನ್‌ರೈಸರ್ಸ್‌ , ಆಡಿರುವ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲು ಹಾಗೂ 1 ಪಂದ್ಯ ರದ್ದು 17 ಅಂಕ ಕಲೆಹಾಕಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಗೆಲುವು ದಾಖಲಿಸಿರುವ ಸನ್‌ರೈಸರ್ಸ್‌ ಪ್ಲೇಆ್ಗೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದು ನೇರವಾಗಿ ೈನಲ್ ತಲುಪುವ ನಿರೀಕ್ಷೆಯಲ್ಲಿದೆ. ಎರಡೂ ತಂಡಗಳ ಅಗ್ರ ಕ್ರಮಾಂಕ ಾರ್ಮ್‌ನಲ್ಲಿದ್ದು, ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆಗಳಿವೆ.

ಗೆದ್ದವರು ಫೈನಲ್‌ಗೆ,ಸೋತರೆ ಔಟ್ ಅಲ್ಲ! :

ಮೊದಲ ಕ್ವಾಲಿೈಯರ್ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಮೆ 26ರಂದು ಚೆನ್ನೈನ ಚೆಪಾಕ್‌ನಲ್ಲಿ ನಡೆಯಲಿರುವ ೈನಲ್‌ಗೆ ತಲುಪಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ದೊರೆಯಲಿದ್ದು, ರಾಜಸ್ಥಾನ-ಆರ್‌ಸಿಬಿ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರ ಎದುರು ಶುಕ್ರವಾರ ನಡೆಯಲಿರುವ 2ನೇ ಕ್ವಾಲಿೈಯರ್‌ನಲ್ಲಿ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net