

ಬೆಂಗಳೂರು: ಭಾರತ ತಂಡದ ದಿಗ್ಗಜರು ತಮ್ಮ ಆಟದ ಶೈಲಿ ಮೂಲಕವೇ ಒಂದಿಲ್ಲೊಂದು ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದ್ದರು. ರಾಹುಲ್ ದ್ರಾವಿಡ್ ದಿ ವಾಲ್ ಎಂದು ಪ್ರಸಿದ್ಧಿ ಪಡೆದಿದ್ದರೆ, ಸಚಿನ್ ತೆಂಡುಲ್ಕರ್ ಕ್ರಿಕೆಟ್ ದೇವರು ಅಂತಲೇ ಕರೆಸಿಕೊಂಡರು. ತಮ್ಮ ಫೇವರಿಟ್ ಹೊಡೆತಗಳ ಮೂಲಕವೇ ಗಂಗೂಲಿ ಪ್ರಸಿದ್ಧಿ ಪಡೆದಿದ್ದರು. ಆಫ್-ಸೈಡ್ನಲ್ಲಿ 9 ಫೀಲ್ಡರ್ಗಳೂ ಇದ್ದರೂ ನಿರಾಯಸವಾಗಿ ಚೆಂಡು ತಳ್ಳುವುದರಲ್ಲಿ ಗಂಗೂಲಿ ಫೇಮಸ್ ಆಗಿದ್ದರು. ಇದಕ್ಕಾಗಿ ಅವರನ್ನು ಆಫ್-ಸೈಡ್ ಗಳ ರಾಜ ಎನ್ನಲಾಗುತ್ತಿತ್ತು. ಗಂಗೂಲಿಗೆ ಈ ಹೆಸರು ಇಟ್ಟಿದ್ದು ಬೇರೆಯಾರು ಅಲ್ಲ ಕನ್ನಡಿಗ ರಾಹುಲ್ ದ್ರಾವಿಡ್.
ಬಿಸಿಸಿಐ ಮುಖ್ಯಸ್ಥರು ಆದ ಸೌರವ್ ಗಂಗೂಲಿ ಬುಧವಾರವಷ್ಟೇ 48ನೇ ಹುಟ್ಟುಹಬ್ಬ ಆಚರಿಸಿಕೊಂಡರು. ವಿಶ್ವ ಕ್ರಿಕೆಟ್ ವಲಯ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ದಾದಾಗೆ ಶುಭಾಶಯ ಕೋರಿದ್ದಾರೆ.